Wednesday, 14th May 2025

ಸಲ್ಮಾನ್ ಖಾನ್, ಅಂಗರಕ್ಷಕ ನವಾಜ್’ಗೆ ಸಮನ್ಸ್

ಮುಂಬೈ: ಪತ್ರಕರ್ತರೊಬ್ಬರು (2019ರಲ್ಲಿ) ನೀಡಿದ್ದ ದೂರಿನ ಮೇರೆಗೆ ನಟ ಸಲ್ಮಾನ್ ಖಾನ್ ಮತ್ತು ಅವರ ಅಂಗರಕ್ಷಕ ನವಾಜ್ ಶೇಖ್ ಅವರಿಗೆ ಸ್ಥಳೀಯ ನ್ಯಾಯಾಲಯವು ಸಮನ್ಸ್ ನೀಡಿದೆ.

ಪೊಲೀಸ್ ವರದಿಯ ಅನ್ವಯ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆರ್.ಆರ್.ಖಾನ್ ಅವರು ಏಪ್ರಿಲ್ 5 ಕ್ಕೆ ವಿಚಾರಣೆ ಮುಂದೂಡಿದರು.

ಪತ್ರಕರ್ತ ಅಶೋಕ್ ಪಾಂಡೆ ಅವರು ದೂರಿನಲ್ಲಿ ಸಲ್ಮಾನ್ ಖಾನ್ ಮತ್ತು ಶೇಖ್ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳುವಂತೆ ಕೋರಿದ್ದರು. ಮುಂಬೈನ ಬೀದಿಯಲ್ಲಿ ಸೈಕ್ಲಿಂಗ್ ಮಾಡುವಾಗ ಕೆಲವು ಮಾಧ್ಯಮದವರು ತಮ್ಮ ಫೋಟೋಗಳನ್ನು ಕ್ಲಿಕ್ ಮಾಡಲು ಪ್ರಾರಂಭಿಸಿದಾಗ ನಟ ತನ್ನ ಮೊಬೈಲ್ ಫೋನ್ ಅನ್ನು ಕಸಿದುಕೊಂಡಿದ್ದಾರೆ. ನಂತರ ವಾಗ್ವಾದಕ್ಕೆ ಇಳಿದು ಬೆದರಿಕೆ ಹಾಕಿದ್ದಾರೆ ಎಂದು ಪಾಂಡೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.