Thursday, 15th May 2025

ಅರ್ಥಶಾಸ್ತ್ರಜ್ಞೆ ಜಯತಿ ಘೋಷ್ ನೇಮಕ

ವಿಶ್ವಸಂಸ್ಥೆ: ವಿಶ್ವ ಸಂಸ್ಥೆ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಅವರು, ಹೊಸ ಉನ್ನತ ಮಟ್ಟದ ಸಲಹಾ ಮಂಡಳಿಗೆ ಭಾರತ ಮೂಲದ ಅಭಿವೃದ್ಧಿ ಅರ್ಥಶಾಸ್ತ್ರಜ್ಞೆ ಜಯತಿ ಘೋಷ್ ಅವರನ್ನು ನೇಮಕ ಮಾಡಿದ್ದಾರೆ.

66 ವರ್ಷದ ಘೋಷ್ ಅವರು ಮ್ಯಾಸಚೂಸೆಟ್ಸ್ ಆಮ್ಹೆಸ್ಟರ್ ವಿವಿಯಲ್ಲಿ ಪ್ರಾಧ್ಯಾಪಕ ರಾಗಿದ್ದಾರೆ. ಈ ಹಿಂದೆ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಸಾಮಾಜಿಕ ವಿಜ್ಞಾನಗಳ ಸ್ಕೂಲ್ ಆಫ್ ಎಕನಾಮಿಕ್ ಸ್ಟಡೀಸ್ ಮತ್ತು ಪ್ಲಾನಿಂಗ್ ಸೆಂಟರ್‍ನ ಅಧ್ಯಕ್ಷರಾಗಿದ್ದರು.

ವಿಶ್ವ ಸಂಸ್ಥೆ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಉನ್ನತ ಮಟ್ಟದ ಸಲಹಾ ಮಂಡಳಿಯ ಸದಸ್ಯರೂ ಆಗಿದ್ದಾರೆ.

ಯುಎನ್ ಮುಖ್ಯಸ್ಥ ಗುಟೆರೆಸ್ ಅವರು ಲೈಬೀರಿಯನ್ ಮಾಜಿ ಅಧ್ಯಕ್ಷ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಎಲ್ಲಾನ್ ಜಾನ್ಸನ್ ಸಿರ್ಲೀಫ್ ಮತ್ತು ಮಾಜಿ ಸ್ವೀಡಿಷ್ ಪ್ರಧಾನಿ ಸ್ಟೀಫನ್ ಲೋಫ್ವೆನ್ ಅವರನ್ನು ಸಹ-ಅಧ್ಯಕ್ಷರಾಗಿ ಪರಿಣಾಮಕಾರಿ ಬಹುಪಕ್ಷೀಯ ತೆಯ ಸಲಹಾ ಮಂಡಳಿಯ ಸ್ಥಾಪನೆಯನ್ನು ಘೋಷಿಸಿದರು.