Thursday, 15th May 2025

ಭಾರತೀಯರ ಸ್ಥಳಾಂತರ ಕಾರ್ಯಾಚರಣೆಗೆ ಸ್ಪೈಸ್‌ ಜೆಟ್ ಬಲ

ನವದೆಹಲಿ: ಭಾರತ ಉಕ್ರೇನ್‌ನಲ್ಲಿರುವ ಭಾರತೀಯರನ್ನು ಸ್ಥಳಾಂತರಿಸುತ್ತಿದೆ. ಈ ಕಾರ್ಯಾಚರಣೆಗೆ ಸ್ಪೈಸ್‌ ಜೆಟ್ ವಿಮಾನ ಸಂಸ್ಥೆ ಕೂಡ ಕೈ ಜೋಡಿಸಿದೆ. ಸ್ಪೈಸ್‌ಜೆಟ್ ವಿಮಾನಗಳು ಸ್ಥಳಾಂತರದ ಕಾರ್ಯಾಚರಣೆಯಲ್ಲಿ ಭಾಗಿಯಾಗಲಿವೆ.

ಸ್ಪೈಸ್‌ಜೆಟ್ ವಿಮಾನಗಳು ಮತ್ತು ಇತರ ವಿಮಾನಯಾನ ಸಂಸ್ಥೆಗಳು ಶೀಘ್ರದಲ್ಲೇ ಸ್ಥಳಾಂತರಿಸುವ ಪ್ರಕ್ರಿಯೆಗೆ ಸೇರಿಕೊಳ್ಳಲಿವೆ ಎಂದು ಸ್ಪೈಸ್‌ಜೆಟ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಸರ್ಕಾರವು ಎಲ್ಲಾ ವಿಮಾನಯಾನ ಕಂಪನಿಗಳನ್ನು ಸಂಪರ್ಕಿಸಿದ್ದು, ಸದ್ಯಕ್ಕೆ ಸ್ಥಳಾಂತರ ಕಾರ್ಯಾಚರಣೆಗೆ ಯಾವುದೇ ದರವನ್ನು ನಿಗದಿಪಡಿಸಿಲ್ಲ. ಎಲ್ಲರನ್ನು ಸುರಕ್ಷಿತವಾಗಿ ಮರಳಿ ಕರೆತರುವುದು ಪ್ರಾಥಮಿಕ ಗುರಿಯಾಗಿದೆ ಮತ್ತು ಪ್ರಯಾಣಿಕರಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಸಿಂಗ್ ಹೇಳಿದ್ದಾರೆ.