Thursday, 15th May 2025

#ಆಪರೇಷನ್ ಗಂಗಾ: ಬುಡಾಪೆಸ್ಟ್’ನಿಂದ ಆರನೇ ವಿಮಾನ ಟೇಕ್ ಆಫ್

ನವದೆಹಲಿ: ಭಾರತೀಯರನ್ನು ಹೊತ್ತ ಆರನೇ ವಿಮಾನವು ಸೋಮವಾರ ಸಂಜೆ ದೆಹಲಿಯನ್ನು ತಲುಪಲಿದೆ.

ಉಕ್ರೇನ್ ಗಡಿ ದಾಟಿ ಹಂಗೇರಿಗೆ ಬಂದಿದ್ದ 240 ಮಂದಿಯನ್ನು ಆರನೇ #ಆಪರೇಷನ್ ಗಂಗಾ ವಿಮಾನವು ಬುಡಾಪೆಸ್ಟ್ ನಿಂದ ಟೇಕ್ ಆಫ್ ಆಗಿದ್ದು, ದೆಹಲಿಗೆ ಹಿಂತಿರುಗಿಸಲಾಗುತ್ತಿದೆ ಎಂದು ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ್ ಟ್ವೀಟ್ ಮಾಡಿದ್ದಾರೆ.

ಉಕ್ರೇನ್‌ನಿಂದ ಪಲಾಯನ ಮಾಡುವ ಇರಾನ್ ಅಥವಾ ಭಾರತದಂತಹ ಮೂರನೇ ದೇಶಗಳ ನಾಗರಿಕರಿಗೆ ಹಂಗೇರಿ ಮಾನವೀಯ ಕಾರಿಡಾರ್ ಅನ್ನು ತೆರೆದಿದೆ. ವೀಸಾ ಇಲ್ಲದೆ ಅವರನ್ನು ಡೆಬ್ರೆಸೆನ್‌ನ ಹತ್ತಿರದ ವಿಮಾನ ನಿಲ್ದಾಣಕ್ಕೆ ಕರೆದೊಯ್ಯುತ್ತಿದೆ.

ಈಗಾಗಲೇ ೫ ವಿಮಾನಗಳಲ್ಲಿ ಭಾರತೀಯರನ್ನು ಸ್ವದೇಶಕ್ಕೆ ಕರೆತರಲಾಗಿದೆ.