Wednesday, 14th May 2025

ಸಕಲ ಪೊಲೀಸ್‌ ಗೌರವದೊಂದಿಗೆ ಕಲಾತಪಸ್ವಿ ರಾಜೇಶ್ ಅಂತ್ಯಕ್ರಿಯೆ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಕಲಾತಪಸ್ವಿ ರಾಜೇಶ್ (89) ಅವರ ಅಂತ್ಯಕ್ರಿಯೆಯನ್ನು ಸಕಲ ಪೊಲೀಸ್‌ ಗೌರವ ದೊಂದಿಗೆ ಗೋವಿಂದಪುರ ಗ್ರಾಮದ ಬಳಿಯ ತೋಟದಲ್ಲಿ ನೆರವೇರಿಸಲಾಯಿತು.

ಬೆಂಗಳೂರು ಉತ್ತರ ತಾಲೂಕಿನ ಗೋವಿಂದಪುರ ಗ್ರಾಮದ ಬಳಿಯ ಸ್ನೇಹಿತ ಸಿದ್ದಲಿಂಗಯ್ಯನವರ ತೋಟದಲ್ಲಿ ತೋಟದಲ್ಲಿ ರಾಜೇಶ್‌ ಅವರಪುತ್ರರು ಮತ್ತು ಅಳಿಯ ಅಂತಿಮ ವಿಧಿವಿಧಾನ ನೆರವೇರಿಸುವ ಮೂಲಕ ಅಂತ್ಯಸಂಸ್ಕಾರ ಮಾಡಿದರು.

ಫೆ.9ರಂದು ಉಸಿರಾಟದ ಸಮಸ್ಯೆಯಿಂದಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಹಿರಿಯ ನಟ ರಾಜೇಶ್ ಅವರು ದಾಖ ಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ನಿಧನರಾದರು.