Monday, 12th May 2025

ಪಂಜಾಬ್ ವಿಧಾನಸಭಾ ಚುನಾವಣೆ: ಪ್ರಚಾರ ಇಂದು ಸಂಜೆ ಅಂತ್ಯ

ಚಂಡೀಗಢ; ಫೆ.20 ರಂದು ನಿಗದಿಯಾಗಿರುವ ಪಂಜಾಬ್ ವಿಧಾನಸಭಾ ಚುನಾವಣೆಯ ಪ್ರಚಾರವು ಶುಕ್ರವಾರ ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ.

ಚುನಾವಣಾ ಆಯೋಗವು ಎಲ್ಲಾ ಸ್ಟಾರ್ ಪ್ರಚಾರಕರು ಸಂಜೆ 6 ಗಂಟೆಗೆ ಪ್ರಚಾರ ಕೊನೆ ಮಾಡುವಂತೆ ಸೂಚನೆ ನೀಡಿದೆ. ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಅದರ ನಂತರ ಮನೆ-ಮನೆಗೆ ಪ್ರಚಾರಕ್ಕೆ ಕಡಿಮೆ ಸಂಖ್ಯೆಯಲ್ಲಿ ಹೋಗಬಹುದು.

 

ಪಂಜಾಬ್ ಪೊಲೀಸ್ ಮತ್ತು ಕೇಂದ್ರ ಅರೆಸೇನಾ ಪಡೆ ಸಿಬ್ಬಂದಿ ಹೋಟೆಲ್‌ಗಳು, ಲಾಡ್ಜ್‌ಗಳು, ಸಮು ದಾಯ ಕೇಂದ್ರಗಳು ಮತ್ತು ಇತರ ಸ್ಥಳಗಳನ್ನು ಹೊರಗಿನವರು ಮತ್ತು ಮತದಾರರಲ್ಲದವರನ್ನು ಸ್ಥಳಾಂತರಿಸಲು ಪರಿಶೀಲನೆ ಮಾಡಲು ಪ್ರಾರಂಭ ಮಾಡುತ್ತಾರೆ ಎಂದು ಚುನಾವಣಾ ಆಯೋಗ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.

ರಾಜ್ಯದ 117 ಕ್ಷೇತ್ರಗಳಿಗೆ ಭಾನುವಾರ ಬೆಳಗ್ಗೆ 8 ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದ್ದು, 23 ಜಿಲ್ಲೆಗಳಲ್ಲಿ ಕಾನೂನು ಸುವ್ಯವಸ್ಥೆ, ಖರ್ಚು ವೆಚ್ಚ ಮತ್ತು ಸಾಮಾನ್ಯ ಉದ್ದೇಶಕ್ಕಾಗಿ ಮೂವರು ವೀಕ್ಷಕರನ್ನು ಚುನಾವಣಾ ಆಯೋಗ ನಿಯೋಜಿಸಿದೆ.

ಭದ್ರತಾ ವಿಭಾಗದವರು ಮತದಾನದ ದಿನದವರೆಗೆ ಅವರು ನೋಂದಾಯಿತ ಮತದಾರರಾಗಿರುವ ಕ್ಷೇತ್ರದಲ್ಲಿಯೇ ಇರುವಂತೆ ಚುನಾವಣಾ ಆಯೋಗ ತಿಳಿಸಿದೆ.

ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ, ಶುಕ್ರವಾರ ಸಂಜೆ 6 ಗಂಟೆಯ ನಂತರ ದೂರದರ್ಶನ ಚಾನೆಲ್‌ಗಳು, ರೇಡಿಯೋ ಮತ್ತು ಪತ್ರಿಕೆ ಗಳಲ್ಲಿ ಚುನಾವಣಾ ಸಂಬಂಧಿತ ವಿಷಯಗಳನ್ನು ಪ್ರಸಾರ ಮಾಡುವುದನ್ನು ಅಥವಾ ಪ್ರಚಾರ ಮಾಡುವುದನ್ನು ನಿಷೇಧಿಸಲಾಗಿದೆ.