Wednesday, 14th May 2025

ಅಂಡರ್‌-19 ಏಕದಿನ ವಿಶ್ವಕಪ್‌ ಫೈನಲ್‌ ಇಂದು

ನಾರ್ತ್‌ ಸೌಂಡ್‌ (ಆಂಟಿಗಾ): ಅಂಡರ್‌-19 ಏಕದಿನ ವಿಶ್ವಕಪ್‌ ಪಂದ್ಯಾವಳಿಯ ಅತ್ಯಂತ ಯಶಸ್ವಿ ತಂಡವಾಗಿರುವ ಭಾರತ ಶನಿವಾರ ಮತ್ತೊಂದು ಎತ್ತರಕ್ಕೆ ತಲುಪಲು ಸಜ್ಜಾಗಿದೆ.

ಕೆರಿಬಿಯನ್‌ ದ್ವೀಪದ ನಾರ್ತ್‌ ಸೌಂಡ್‌ನ‌ “ಸರ್‌ ವಿವಿಯನ್‌ ರಿಚರ್ಡ್ಸ್‌ ಸ್ಟೇಡಿಯಂ’ನಲ್ಲಿ ಐದನೇ ಕಿರೀಟ ಏರಿಸಿಕೊಳ್ಳುವ ಯೋಜನೆಯಲ್ಲಿದೆ.

ನಾಯಕ ಧುಲ್‌ ಹಾಗೂ ಉಪನಾಯಕ ರಶೀದ್‌ ಸೇರಿದಂತೆ ತಂಡದ ಬಹಳಷ್ಟು ಮಂದಿಗೆ ಕೋವಿಡ್‌ ಸೋಂಕು ತಗುಲಿದರೂ ಧೈರ್ಯಗುಂದದ ಭಾರತ ದಿಟ್ಟ ಹೋರಾಟ ನಡೆಸಿ ಗೆದ್ದು ಬಂದಿತ್ತು. ತೋರ್ಪ ಡಿಸಿದ ಬ್ಯಾಟಿಂಗ್‌ ವೈಭವವನ್ನು ಮರೆಯುವಂತಿಲ್ಲ.

ಆರಂಭಿಕರಾದ ಹರ್ನೂರ್‌ ಸಿಂಗ್‌ ಮತ್ತು ಅಂಗ್‌ಕೃಷ್‌ ರಘುವಂಶಿ ತಂಡದ ಆಧಾರಸ್ತಂಭ. ಆದರೆ ಆಸ್ಟ್ರೇಲಿಯ ವಿರುದ್ಧ ಇಬ್ಬರೂ ವಿಫ‌ಲರಾಗಿದ್ದರು.

ನಿಶಾಂತ್‌ ಸಿಂಧು, ರಾಜ್ಯವರ್ಧನ್‌ , ಕೀಪರ್‌ ದಿನೇಶ್‌ ಬಾನಾ, ರಾಜ್‌ ಬಾವಾ ಅವರಿಂದ ತಂಡದ ಮಧ್ಯಮ ಕ್ರಮಾಂಕ ಹೆಚ್ಚು ಶಕ್ತಿಶಾಲಿಯಾಗಿ ರೂಪು ಗೊಂಡಿದೆ. ಆಲ್‌ರೌಂಡರ್‌ಗಳ ದೊಡ್ಡ ಪಡೆಯೇ ಇರುವುದು ಭಾರತದ ಹೆಗ್ಗಳಿಕೆ. ಬ್ಯಾಟಿಂಗ್‌ ಜತೆಗೆ ಬೌಲಿಂಗ್‌ ಕೂಡ ಮಾಡಬಲ್ಲ 7 ಆಟಗಾರರು ಈ ತಂಡದಲ್ಲಿ ದ್ದಾರೆ.

ಆಸ್ಟ್ರೇಲಿಯ ವಿರುದ್ಧದ ಸೆಮಿಫೈನಲ್‌ನಲ್ಲಿ ಭಾರತಕ್ಕೆ ತುಸು ಆತಂಕವಿತ್ತು. ಬಲಿಷ್ಠ ಆಸ್ಟ್ರೇಲಿಯದ ಮೇಲೆ ಸವಾರಿ ಮಾಡಿ 96 ರನ್ನುಗಳ ಜಯಭೇರಿ ಮೊಳಗಿಸಿದರೋ, ಆಗಲೇ ಇವರು ಇಂಗ್ಲೆಂಡನ್ನು ಮಣಿಸಬಲ್ಲರೆಂಬ ವಿಶ್ವಾಸ ಹೆಪ್ಪುಗಟ್ಟಿದೆ.