Wednesday, 14th May 2025

ರೈಲ್ವೇ ನೇಮಕಾತಿ ಪರೀಕ್ಷೆಯಲ್ಲಿ ಅವ್ಯವಹಾರ: ಇಂದು ಪ್ರತಿಭಟನೆ ತೀವ್ರ

ಪಾಟ್ನಾ: ಗಣರಾಜ್ಯೋತ್ಸವ ಆಚರಿಸುತ್ತಿರುವಾಗ ರೈಲ್ವೇ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ವಿರೋಧಿಸಿ ಅಭ್ಯರ್ಥಿಗಳು ಬಿಹಾರದ ಗಯಾದಲ್ಲಿ ಪ್ರತಿಭಟನೆ ನಡೆಸು ತ್ತಿದ್ದು, ಬುಧವಾರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.

ಚಲಿಸುತ್ತಿದ್ದ ರೈಲುಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಮತ್ತು ಭಾರೀ ಪ್ರಮಾಣದಲ್ಲಿ ರೈಲನ್ನು ಧ್ವಂಸಗೊಳಿಸಲಾಯಿತು. ಅಂಗಳದಲ್ಲಿ ನಿಲ್ಲಿಸಿದ್ದ ಪ್ಯಾಸೆಂಜರ್ ರೈಲಿಗೆ ಬೆಂಕಿ ಹಚ್ಚಲಾ ಗಿದೆ.

ರೈಲು ನಿಲ್ದಾಣದ ಹಲವೆಡೆ ಅಭ್ಯರ್ಥಿಗಳು ರೈಲಿಗೆ ನುಗ್ಗಿ ದಾಂಧಲೆ ನಡೆಸಿದರು. ಕೆಲ ಅಭ್ಯರ್ಥಿಗಳು ರೈಲಿಗೆ ಬೆಂಕಿ ಹಚ್ಚಿದ್ದಾರೆ. ಇದು ವಿದ್ಯಾರ್ಥಿಗಳ ಪ್ರತಿಭಟ ನೆಯ ಮೂರನೇ ದಿನವಾಗಿದ್ದು, ಅವರು ತೀವ್ರ ಆಕ್ರೋಶಗೊಂಡಿದ್ದಾರೆ ಎಂದು ರೈಲ್ವೆ ಕಾರ್ಮಿಕರೊಬ್ಬರು ಹೇಳಿದರು.

ಗಯಾ ರೈಲು ನಿಲ್ದಾಣದ ಆವರಣದಲ್ಲಿ ಚಲಿಸುತ್ತಿದ್ದ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಆಗಮಿಸಿ ದ್ದಾರೆ ಎಂದು ಹೇಳಲಾಗುತ್ತಿದೆ. ಪ್ರತಿಭಟನಾಕಾರರು ಶ್ರಮಜೀವಿ ಎಕ್ಸ್‌ಪ್ರೆಸ್‌ಗೂ ಭಾರಿ ಹಾನಿಯನ್ನುಂಟು ಮಾಡಿದ್ದಾರೆ.

ಗಯಾ ಅಲ್ಲದೆ, ಬಿಹಾರದ ಜೆಹಾನಾಬಾದ್-ಸಮಸ್ತಿಪುರದಲ್ಲೂ ಗಲಾಟೆ ನಡೆದಿದೆ. ಒಂದು ಸ್ಥಳದಲ್ಲಿ ಪರಿಸ್ಥಿತಿ ಯನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದ್ದಾರೆ. ರೈಲ್ವೇ ನೌಕರರ ಮೇಲೆ ಹಲ್ಲೆ ನಡೆಸಿರುವ ಬಗ್ಗೆಯೂ ವರದಿಯಾಗಿದೆ. ಬಿಹಾರದ ಹೊರತಾಗಿ, ಆರ್‌ಆರ್‌ಬಿ-ಎನ್‌ಟಿಪಿಸಿ ಫಲಿತಾಂಶ ಗಳ ವಿರುದ್ಧ ಪ್ರತಿಭಟಿಸಲು ಯುಪಿಯ ಕೆಲವು ಭಾಗಗಳಲ್ಲಿ ಪ್ರತಿಭಟನೆಗಳು ಪ್ರಾರಂಭವಾಗಿವೆ.

ಮಂಗಳವಾರವಷ್ಟೇ ಪ್ರತಿಭಟನಾಕಾರರಿಗೆ ರೈಲ್ವೆ ಇಲಾಖೆಯು ಎಚ್ಚರಿಕೆ ನೀಡಿತ್ತು. ರೈಲ್ವೆ ತಡೆ ಸೇರಿದಂತೆ ಯಾವುದೇ ರೀತಿ ಕಾನೂನುಬಾಹಿರ ಚಟುವಟಿಕೆ ಗಳಲ್ಲಿ ತೊಡಗಿದವರು ಶಾಶ್ವತವಾಗಿ ರೈಲ್ವೆ ಇಲಾಖೆ ಸೇರಿದಂತೆ ಯಾವುದೇ ಕೇಂದ್ರ ಸರ್ಕಾರದ ಉದ್ಯೋಗವನ್ನು ಪಡೆಯುವುದರಿಂದ ವಂಚಿತರಾಗ ಬೇಕಾಗುತ್ತದೆ ಎಂದು ಎಚ್ಚರಿಸಿದೆ.

ಮಂಗಳವಾರ ಪಾಟ್ನಾದಲ್ಲಿ ನಿರುದ್ಯೋಗದ ವಿರುದ್ಧ ಪ್ರತಿಭಟನೆ ನಡೆಸಿದ ಆರೋಪದ ಹಿನ್ನೆಲೆ ವಿದ್ಯಾರ್ಥಿಗಳ ಮೇಲೆ ಉತ್ತರ ಪ್ರದೇಶ ಪೊಲೀಸರು ಹಲ್ಲೆ ನಡೆಸಿದ್ದಾರೆ.