Wednesday, 14th May 2025

ಇಂಡಿಯಾ ಗೇಟ್ ನಲ್ಲಿ ಹಾಲೋಗ್ರಾಂ ಪ್ರತಿಮೆ ಅನಾವರಣ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವದೆಹಲಿಯ ಇಂಡಿಯಾ ಗೇಟ್ ನಲ್ಲಿ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್  ಅವರ 125ನೇ ಜನ್ಮ ದಿನಾ ಚರಣೆಯ ಸಂದರ್ಭದಲ್ಲಿ ಹಾಲೋಗ್ರಾಂ ಪ್ರತಿಮೆಯನ್ನು ಅನಾವರಣಗೊಳಿಸಿದರು.

ಸ್ಥಳದಲ್ಲಿ ಗ್ರಾನೈಟ್ ಪ್ರತಿಮೆಯನ್ನು ಸ್ಥಾಪಿಸುವವರೆಗೆ ಹಾಲೋಗ್ರಾಂ ಪ್ರತಿಮೆ ಇರಲಿದೆ. ಇದೇ ವೇಳೆ ಮೋದಿ ಅವರು 2019, 2020, 2021 ಮತ್ತು 2022 ರ ಸುಭಾಷ್ ಚಂದ್ರ ಬೋಸ್ ಆಪ್ತ ಪ್ರಬಂಧನ್ ಪುರಸ್ಕಾರವನ್ನ ಸಹ ನೀಡಿದರು.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವ್ರ ಜನ್ಮ ದಿನವನ್ನ ಅಳವಡಿಸಲು ದೇಶದಲ್ಲಿ ಗಣರಾಜ್ಯೋ ತ್ಸವವನ್ನ ಪ್ರತಿ ವರ್ಷ ಜ.23ರಂದು ಪ್ರಾರಂಭಿಸ ಲಾಗುವುದು ಎಂದು ಸರ್ಕಾರ ಈ ವಾರದ ಆರಂಭದಲ್ಲಿ ಘೋಷಿಸಿತು.

ಹಾಲೋಗ್ರಾಂ ಪ್ರತಿಮೆಯು 30,000 ಲ್ಯೂಮೆನ್ಸ್ 4 ಸಾವಿರ ಪ್ರೊಜೆಕ್ಟರ್ʼನಿಂದ ಚಾಲಿತವಾಗಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 3ಡಿ ಚಿತ್ರವನ್ನು ಹೊಲೊಗ್ರಾಮ್ ಪರಿಣಾಮವನ್ನ ಸೃಷ್ಟಿಸಲು ಅದರ ಮೇಲೆ ಬಿಂಬಿಸಲಾಗಿದೆ. ಹೊಲೊಗ್ರಾಮ್ ಪ್ರತಿಮೆಯ ಗಾತ್ರವು 28 ಅಡಿ ಎತ್ತರ ಮತ್ತು 6 ಅಡಿ ಅಗಲವಿದೆ.