Monday, 12th May 2025

ಪಂಜಾಬ್ ವಿಧಾನಸಭಾ ಚುನಾವಣೆ ಫೆಬ್ರವರಿ 20ಕ್ಕೆ ಮರುನಿಗದಿ

ನವದೆಹಲಿ: ಫೆಬ್ರವರಿ 10 ರಿಂದ 16ರವರೆಗೆ ಪಂಜಾಬ್ ನಲ್ಲಿ ಗುರು ರವಿದಾಸ್ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸುವ ಕಾರಣ, ಇದೇ ಸಂದರ್ಭದಲ್ಲಿ ನಿಗದಿಯಾಗಿದ್ದ ಪಂಜಾಬ್ ವಿಧಾನಸಭಾ ಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗ ಮುಂದೂಡಿದೆ.

ಚುನಾವಣಾ ಆಯೋಗವು, ಫೆಬ್ರವರಿ 14ರಂದು ನಿಗಧಿ ಪಡಿಸಲಾಗಿದ್ದಂತ ಪಂಜಾಬ್ ವಿಧಾನಸಭಾ ಚುನಾವಣೆಯನ್ನು ಗುರು ರವಿದಾಸ್ ಜನ್ಮದಿನದ ಪ್ರಯುಕ್ತ ವಿಧಾನಸಭಾ ಚುನಾವಣೆಯನ್ನು ಮುಂದೂಡುವಂತ ನಿರ್ಧಾರವನ್ನು ಕೈಗೊಂಡಿದೆ.

ಪಂಜಾಬ್ ನಲ್ಲಿ ಮತದಾನದ ದಿನಾಂಕವನ್ನು ಫೆಬ್ರವರಿ 20ಕ್ಕೆ ಮರುನಿಗದಿಪಡಿಸಿದೆ. ಈ ಮೊದಲು, ಇದು ಫೆಬ್ರವರಿ 14ರಂದು ನಡೆಯಬೇಕಿತ್ತು.