Thursday, 15th May 2025

ವಿಷ ಅನಿಲ ಸೋರಿಕೆ: ಒಬ್ಬರ ಸಾವು, ಇಬ್ಬರು ಅಸ್ವಸ್ಥ

ಮುಂಬೈ: ಸೋಮವಾರ ಮುಂಬೈನ ಘಾಟ್‌ಕೋಪರ್ ಪ್ರದೇಶದಲ್ಲಿ ವಿಷ ಅನಿಲ ಸೋರಿಕೆಯಾಗಿ, ಸ್ಥಳದಲ್ಲಿದ್ದ ಮೂರು ಜನರಲ್ಲಿ ಒಬ್ಬರು ಮೃತಪಟ್ಟು, ಮತ್ತಿಬ್ಬರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಾರಾಯಣನಗರದ ಕುರ್ಲಾ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿ ಘಟನೆ ನಡೆದಿದ್ದು, ಅಲ್ಲಿ ಮೆಥನಾಲ್ ಮತ್ತು ಸೈನೂರಿಕ್ ಕ್ಲೋರೈಡ್ ಸೋರಿಕೆಯಾಗಿದೆ ಎಂದು ತಿಳಿದು ಬಂದಿದೆ. ಈ ಸಂದರ್ಭದಲ್ಲಿ ಪ್ರದೇಶದಲ್ಲಿದ್ದ ಮೂವರು ವಿಷಾನಿಲ ಸೇವಿಸಿದ್ದಾರೆ. ಮೂವರನ್ನು ಸಮೀಪದ ರಾಜವಾಡಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರಲ್ಲಿ ಒಬ್ಬರು ಮೃತಪಟ್ಟಿದ್ದಾರೆ.

ಮೃತರನ್ನು 36 ವರ್ಷದ ರಾಮನಿವಾಸ್ ಸರೋಜ್ ಎಂದು ಗುರುತಿಸಲಾಗಿದೆ. ಇನ್ನಿಬ್ಬರು ವ್ಯಕ್ತಿಗಳಾದ ರೂಬಿನ್ ಸೋಲ್ಕರ್ (36) ಮತ್ತು ಸರ್ವಾಂಶ್ ಸೋನಾವನೆ (25) ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ.