Monday, 12th May 2025

ವಿದೇಶಿಗರಿಗೆ ಒಂದು ವಾರ ಕಾಲ ಕ್ವಾರಂಟೈನ್‌ ಕಡ್ಡಾಯ

ನವದೆಹಲಿ: ಹೆಚ್ಚುತ್ತಿರುವ ಒಮೈಕ್ರಾನ್‌ ಹಾಗೂ ಕೋವಿಡ್‌ ಮೂರನೆ ಅಲೆ ಆತಂಕದಲ್ಲಿ ಹೊರದೇಶಗಳಿಂದ ಭಾರತಕ್ಕೆ ಬರುವ ಎಲ್ಲರಿಗೂ ಕ್ವಾರೈಂಟೈನ್‌ ಅನ್ನು ಕಡ್ಡಾಯಗೊಳಿಸಲಾಗಿದೆ.

ವಿದೇಶಿ ಪ್ರಯಾಣಿಕರು ಕಡ್ಡಾಯವಾಗಿ ಒಂದು ವಾರಗಳ ಕಾಲ ಕ್ವಾರಂಟೈನ್‌ ನಲ್ಲಿರಬೇಕು ಹಾಗೂ ಎಂಟನೇ ದಿನ ಕೋವಿಡ್‌ ಟೆಸ್ಟ್‌ ಮಾಡಿಸಿಕೊಳ್ಳಬೇಕು ಎಂದು ನೂತನ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. 19 ದೇಶಗಳನ್ನು ಅತಿ ಅಪಾಯಕಾರಿ ದೇಶಗಳ ಪಟ್ಟಿಯಲ್ಲಿ ಗುರುತಿಸಲಾಗಿದೆ.

ಎಲ್ಲಾ ಪ್ರಯಾಣಿಕರು ಏಳು ದಿನಗಳ ಕಾಲ ಐಸೋಲೇಶನ್‌ನಲ್ಲಿ ಇರಬೇಕು. ನಂತರ ಕೋವಿಡ್‌ ಪರೀಕ್ಷೆಗೆ ಒಳಪಡಬೇಕು. ಕೋವಿಡ್‌ ಪಾಸಿಟಿವ್‌ ಆದರೆ ಮತ್ತೆ ಐಸೋಲೇಶನ್‌ನಲ್ಲಿರಬೇಕು ಹಾಗೂ ಅವರ ಮಾದರಿಯನ್ನು ಜೆನೊಮ್‌ ಪರೀಕ್ಷೆಗೆ ಕಳುಹಿಸಲಾಗುತ್ತದೆ.

ಪಾಸಿಟಿವ್‌ ಬಂದ ಪ್ರಯಾಣಿಕರ ಸಮೀಪ ಕುಳಿತುಕೊಂಡವರು ಹಾಗೂ ಸಿಬ್ಬಂದಿಗಳನ್ನು ಪ್ರಾಥಮಿಕ ಸಂಪರ್ಕಕ್ಕೆ ಬಂದವರೆಂದು ಪರಿಗಣಿಸಲಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.