Tuesday, 13th May 2025

ಬಚ್ಚನ್ ನಿವಾಸ ಜಲ್ಸಾದ ಉದ್ಯೋಗಿಗೆ ಕರೋನಾ ಪಾಸಿಟಿವ್

ಮುಂಬೈ: ಅಮಿತಾಬ್ ಬಚ್ಚನ್ ಅವರ ಮುಂಬೈ ನಿವಾಸ ಜಲ್ಸಾದಲ್ಲಿ ಕೆಲಸ ಮಾಡುವ ಉದ್ಯೋಗಿಯೊಬ್ಬರಿಗೆ ಕೊರೋನಾ ಪಾಸಿಟಿವ್  ಎಂಬುದಾಗಿ ದೃಢಪಟ್ಟಿದೆ. ಹೀಗಾಗಿ ಬಾಲಿವುಡ್ ಬಿಗ್ ಬೀ ಅಮಿತಾಬ್ ಬಚ್ಚನ್ ಗೆ ಸೋಂಕಿನ ಭೀತಿ ಎದುರಾಗಿದೆ.

ಬಚ್ಚನ್ ಅವರ ನಿವಾಸದಲ್ಲಿ ಕೆಲಸ ಮಾಡುತ್ತಿದ್ದ 31 ಸಿಬ್ಬಂದಿಗಳಿಗೆ ನಗರದಲ್ಲಿ ಕರೋನಾ ಹೆಚ್ಚಳದ ಕಾರಣದಿಂದಾಗಿ ಜನವರಿ 2ರಂದು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷೆಯಲ್ಲಿ ಓರ್ವ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ಎಂದು ವರದಿಯಲ್ಲಿ ದೃಢಪಟ್ಟಿದೆ.

2020 ರಲ್ಲಿ, ಅಮಿತಾಬ್ ಬಚ್ಚನ್ ಅವರಿಗೆ ಪಾಸಿಟಿವ್ ಎಂಬುದಾಗಿ ದೃಢಪಟ್ಟಿತ್ತು. ನಂತರ ಮುಂಬೈನ ನಾನಾವತಿ ಆಸ್ಪತ್ರೆಗೆ ಸ್ಥಳಾಂತರಿಸಿ, ಚಿಕಿತ್ಸೆ ಬಳಿಕ ಗುಣಮುಖರಾಗಿದ್ದರು.