Wednesday, 14th May 2025

ನಿರ್ಮಾಪಕಿ ಏಕ್ತಾ ಕಪೂರ್’ಗೆ ಸೋಂಕು ದೃಢ

#Ekta Kapoor

ನವದೆಹಲಿ : ಅನೇಕ ಬಾಲಿವುಡ್ ಮತ್ತು ಟೆಲಿವಿಷನ್ ಸೆಲೆಬ್ರಿಟಿಗಳು ಮಾರಣಾಂತಿಕ ವೈರಸ್ʼಗೆ ತುತ್ತಾಗಿದ್ದಾರೆ. ನಿರ್ಮಾಪಕಿ ಏಕ್ತಾ ಕಪೂರ್ ಸೋಂಕು ದೃಢಪಟ್ಟಿದೆ.

ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ನೀಡಿರುವ ಏಕ್ತಾ ಕಪೂರ್‌, ಪ್ರಸ್ತುತ ಹೋಮ್ ಕ್ವಾರಂಟೈನ್ ʼನಲ್ಲಿರುವುದಾಗಿ ಹೇಳಿಕೊಂಡಿದ್ದಾರೆ. ತಮ್ಮನ್ನ ಭೇಟಿಯಾದ ತನ್ನ ಎಲ್ಲಾ ಸ್ನೇಹಿತರು ಮತ್ತು ಕುಟುಂಬವನ್ನ ಸಹ ಪರೀಕ್ಷೆಗೆ ಒಳಗಾಗುವಂತೆ ಕೇಳಿದ್ದಾರೆ.

ಏಕ್ತಾ ಕಪೂರ್ ಅವರು ಜನವರಿ 3ರಂದು ತಮ್ಮ ಅಧಿಕೃತ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಕೋವಿಡ್-19 ಗೆ ಪಾಸಿಟಿವ್ ಎಂದು ಖಚಿತಪಡಿಸಿದ್ದಾರೆ. ‘ಎಲ್ಲಾ ಮುನ್ನೆಚ್ಚರಿಕೆಗಳನ್ನ ತೆಗೆದುಕೊಂಡರೂ ಕೋವಿಡ್ ಪಾಸಿಟಿವ್ ಪರೀಕ್ಷಿಸಿದ್ದೇನೆ. ನಾನು ಚೆನ್ನಾಗಿದ್ದೇನೆ ಮತ್ತು ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರೂ ದಯವಿಟ್ಟು ತಮ್ಮನ್ನು ಪರೀಕ್ಷಿಸಿಕೊಳ್ಳುವಂತೆ ನಾನು ವಿನಂತಿಸುತ್ತೇನೆ’ ಎಂದಿದ್ದಾರೆ.