Thursday, 15th May 2025

ಕುಪ್ವಾರಾ ಬ್ರೇಕಿಂಗ್: ಓರ್ವ ನುಸುಳುಕೋರನ ಹತ್ಯೆ, ಶಸಾಸ್ತ್ರಗಳ ವಶ

ಕುಪ್ವಾರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಗಡಿಯೊಳಗೆ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನದ ಓರ್ವ ಪ್ರಜೆಯನ್ನು ಭಾರತೀಯ ಸೈನಿಕರು ಹತ್ಯೆ ಮಾಡಿದ್ದಾರೆ. ಆತನಿಂದ ಎಕೆ-47 ರೈಫಲ್ ಮತ್ತು ಅಪಾರ ಪ್ರಮಾಣದ ಶಸಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

ನಿಯಂತ್ರಣ ರೇಖೆಯುದ್ದಕ್ಕೂ ಉಭಯ ಸೇನೆಗಳ ನಡುವೆ ನಡೆಯುತ್ತಿರುವ ಕದನ ವಿರಾಮ ತಿಳಿವಳಿಕೆಯ ಸಂಪೂರ್ಣ ಉಲ್ಲಂಘನೆ ಅಥವಾ ಪಾಕಿಸ್ತಾನ ಸೇನೆಯ ಗಡಿ ಕ್ರಿಯಾ ತಂಡ ಜ.1 ರಂದು ಕುಪ್ವಾರ ಜಿಲ್ಲೆಯ ಕೇರಾನ್ ವಲಯದಲ್ಲಿ ಒಳನುಸುಳಲು ಯತ್ನಿಸಿದೆ.

ಗಡಿಯೊಳಗೆ ನುಸುಳಲು ಯತ್ನಿಸಿದ ವ್ಯಕ್ತಿಯನ್ನು ಪಾಕಿಸ್ತಾನದ ಮೊಹಮ್ಮದ್ ಸಬೀರ್ ಮಲ್ಲಿಕ್ ಎಂದು ಗುರುತಿಸಲಾಗಿದೆ. ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.