Wednesday, 14th May 2025

ಸಂವೇದಿ ಸೂಚ್ಯಂಕ: 600 ಅಂಕಗಳ ಏರಿಕೆ

sensex

ಮುಂಬೈ: ಒಮಿಕ್ರಾನ್ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮದ ಹಿನ್ನೆಲೆಯಲ್ಲಿ ಬುಧವಾರ ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ 600ಕ್ಕೂ ಅಧಿಕ ಅಂಕಗಳ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.

ಸಂವೇದಿ ಸೂಚ್ಯಂಕ 611.55 ಅಂಕಗಳಷ್ಟು ಏರಿಕೆಯಾಗಿ, 56,930.56 ಅಂಕಗಳಲ್ಲಿ ವಹಿವಾಟು ಅಂತ್ಯಗೊಂಡಿದೆ. ಎನ್ ಎಸ್ ಇ ನಿಫ್ಟಿ 184.70ಅಂಕಗಳ ಏರಿಕೆಯೊಂದಿಗೆ 16,955.50 ಅಂಕಗಳ ಮಟ್ಟ ತಲುಪಿದೆ.

ಹಿಂಡಲ್ಕೊ ಇಂಡಸ್ಟ್ರೀಸ್, ಟಾಟಾ ಮೋಟಾರ್ಸ್, ಡಿವೀಸ್ ಲ್ಯಾಬೋರೇಟರೀಸ್, ಬಜಾಜ್ ಫೈನಾನ್ಸ್, ಇಚರ್ ಮೋಟಾರ್ಸ್ ಷೇರುಗಳು ಲಾಭಗಳಿಸಿದೆ.

ಬೆಳಗ್ಗೆ ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 449.23 ಅಂಕಗಳಷ್ಟು ಏರಿಕೆಯಾಗಿದ್ದು, 56,768.24 ಅಂಕಗಳಲ್ಲಿ ವಹಿವಾಟು ನಡೆಸಿತ್ತು.