Wednesday, 14th May 2025

ಹೆಣ್ಣುಮಗುವಿನ ಫೋಟೊ ಶೇರ್‌ ಮಾಡಿದ ವೇಗಿ ಭುವನೇಶ್ವರ್‌

Bhuvaneshwar Kumar

ಲಖನೌ/ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ವೇಗಿ ಭುವನೇಶ್ವರ್‌ ಕುಮಾರ್‌, ಕಳೆದ ತಿಂಗಳು ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ.

ಭುವನೇಶ್ವರ್‌ ಕುಮಾರ್‌ ಪತ್ನಿ ನೂಪರ್‌ ದೆಹಲಿಯ ಆಸ್ಪತ್ರೆಯೊಂದರಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ನವೆಂಬರ್‌ 24ರಂದು ದಂಪತಿ ಮೊದಲ ಮಗುವನ್ನು ಬರಮಾಡಿಕೊಂಡಿದ್ದಾರೆ.

ಒಂದು ತಿಂಗಳ ಬಳಿಕ ಭುವನೇಶ್ವರ್‌ ತಮ್ಮ ಮುದ್ದು ಮಗಳ ಮೊದಲ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ತಮ್ಮ ಮಗಳು ಹಾಗೂ ಪತ್ನಿ ಜೊತೆಗೆ ಇರುವ ತಮ್ಮ ಚಿತ್ರವನ್ನು ಭುವಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.