Tuesday, 13th May 2025

ರಾಫೆಲ್ ನಡಾಲ್’ಗೂ ಕರೋನಾ ಪಾಸಿಟಿವ್

RafaelNadal

ದುಬೈ: ಅಬುಧಾಬಿ ಟೆನಿಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಬಳಿಕ ಸ್ಪೇನ್ ನಲ್ಲಿ ಕರೋನಾ ಪರೀಕ್ಷೆಗೆ ಒಳಗಾದ ಟೆನ್ನಿಸ್ ಆಟಗಾರ ರಾಫೆಲ್ ನಡಾಲ್ ಗೂ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.

ಅಬುಧಾಬಿ ಪಂದ್ಯಾವಳಿ ಆಡಿ ಮನೆಗೆ ಹಿಂದಿರುಗಿದ ನಂತರ, ಸ್ಪೇನ್ ಗೆ ಬಂದಾಗ, ಆರ್ ಟಿಪಿಸಿಆರ್ ಮೂಲಕ ಕರೋನಾ ಪರೀಕ್ಷೆಗೆ ಒಳಗಾಗಿದ್ದೆ. ಅದರ ವರದಿಯಲ್ಲಿ ಕೋವಿಡ್-19 ಪಾಸಿಟಿವ್ ಎಂಬುದಾಗಿ ದೃಢಪಟ್ಟಿರುವುದಾಗಿ ತಿಳಿಸಿದ್ದಾರೆ.

ನನಗೆ ಯಾವುದೇ ತೀವ್ರ ತರದ ರೋಗದ ಲಕ್ಷಣಗಳಿಲ್ಲ. ಮುಂಜಾಗ್ರತಾ ಕ್ರಮವಾಗಿ ಸ್ಪೇನ್ ನಿಂದ ಮನೆಗೆ ಮರಳಿರುತ್ತೇನೆ. ನನ್ನ ಸಂಪರ್ಕದಲ್ಲಿದ್ದಂತ ಎಲ್ಲರೂ ಪರೀಕ್ಷೆಗೆ ಒಳಪಡುವಂತೆ ಅವರು ಟ್ವಿಟ್ಟರ್ ನಲ್ಲಿ ಸ್ಪೇನ್ ಭಾಷೆಯಲ್ಲಿ ಮನವಿ ಮಾಡಿದ್ದಾರೆ.