Wednesday, 14th May 2025

ಉತ್ತರ ಕೊರಿಯಾದಲ್ಲಿ 11 ದಿನ ಶೋಕಾಚರಣೆ: ನಗುವಂತಿಲ್ಲ, ಮದ್ಯಪಾನ ನಿಷೇಧ ?

North Korea

ಉತ್ತರ ಕೊರಿಯಾ: ಉತ್ತರ ಕೊರಿಯಾ ದೇಶದಲ್ಲಿ 11 ದಿನಗಳ ಕಾಲ ಶೋಕಾಚರಣೆ ನಡೆಯಲಿದ್ದು, ಈ ಸಂದರ್ಭದಲ್ಲಿ ದೇಶದ ನಾಗರಿಕರು ನಗುವು ದನ್ನು, ಮದ್ಯಪಾನ ಮಾಡುವುದನ್ನು ನಿಷೇಧಿಸಲಾಗಿದೆ. ಕಾರಣ, ಮಾಜಿ ಅಧ್ಯಕ್ಷ, ದಿವಂಗತ ಕಿಮ್ ಜಾಂಗ್ ಇಲ್ ನಿಧನವಾಗಿ ಡಿ.17ಕ್ಕೆ ಹತ್ತು ವರ್ಷವಾಗಿದೆ.

ಉತ್ತರ ಕೊರಿಯಾದ ಸರ್ವಾಧಿಕಾರಿಯಾಗಿದ್ದ ಕಿಮ್ ಜಾಂಗ್ ಇಲ್ 2011ರ ಡಿಸೆಂಬರ್ 17ರಂದು ಮೃತಪಟ್ಟರು. ಕಿಮ್ ಜಾಂಗ್ ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ದೇಶಾದ್ಯಂತ ನಗುವುದು ಸೇರಿ ದಂತೆ ಹಲವಾರು ನಿಷೇಧ ಹೇರಿರುವುದಾಗಿ ವರದಿ ತಿಳಿಸಿದೆ.

ಶೋಕಾಚರಣೆ ನಡೆಯಲಿರುವ ಹತ್ತು ದಿನಗಳ ಕಾಲ ಜನರು ನಗುವಂತಿಲ್ಲ, ಮದ್ಯಪಾನ ಮಾಡು ವಂತಿಲ್ಲ, ಶಾಪಿಂಗ್ ಗೆ ಹೋಗುವಂತಿಲ್ಲ, ವಿರಾಮ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂತಿಲ್ಲ

ಶೋಕಾಚರಣೆಯಲ್ಲಿ ನಿರ್ಬಂಧ ಉಲ್ಲಂಘಿಸಿದರೆ ಕಠಿಣ ಕ್ರಮ ಎದುರಿಸಬೇಕಾಗಲಿದೆ. ಈ ಹಿಂದೆಯೂ ಶೋಕಾಚರಣೆ ಸಂದರ್ಭದಲ್ಲಿ ಮದ್ಯಪಾನ ಮಾಡಿ ಸಿಕ್ಕಿಬಿದ್ದಿದ್ದವರನ್ನು ಕ್ರಿಮಿನಲ್ ಗಳು ಎಂಬಂತೆ ಆರೋಪಿಸಿ ಶಿಕ್ಷೆ ವಿಧಿಸಲಾಗಿದೆ ಎಂದು ನಾಗರಿಕರೊಬ್ಬರು ತಿಳಿಸಿದ್ದಾರೆ.

ಶೋಕಾಚರಣೆ ಸಂದರ್ಭದಲ್ಲಿ ಒಂದು ವೇಳೆ ಬಂಧಿಸಲ್ಪಟ್ಟರೆ ಅವರನ್ನು ಮತ್ತೆ ಎಂದಿಗೂ ನೋಡಲು ಸಾಧ್ಯವಿಲ್ಲ.