Thursday, 15th May 2025

ಪೊಲೀಸ್ ಬಸ್ ಮೇಲೆ ಉಗ್ರರ ದಾಳಿ: 14 ಯೋಧರಿಗೆ ಗಾಯ

Srinagar

ಶ್ರೀನಗರ : ಜಮ್ಮು-ಕಾಶ್ಮೀರಾದ ಶ್ರೀನಗರದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ 14 ಭಾರತೀಯ ಯೋಧರಿಗೆ ಗಾಯಗಳಾಗಿದ್ದು, ಮೂವರ ಸ್ಥಿತಿ ಗಂಭೀರ ವಾಗಿದೆ.

ಶ್ರೀನಗರದ ಝವಾನ್ ಪ್ರದೇಶದಲ್ಲಿ ಝವಾನ್ ಪ್ರದೇಶದಲ್ಲಿ ಪೊಲೀಸ್ ಬಸ್ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದರು.

ಶ್ರೀನಗರದ ಪಂಥಾ ಚೌಕ್ ಪ್ರದೇಶದ ಜೆವಾನ್ ಬಳಿ ಭಯೋತ್ಪಾದಕರು ಪೊಲೀಸ್ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗಾಯಗೊಂಡ ಎಲ್ಲಾ ಸಿಬ್ಬಂದಿಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಭಾರತೀಯ ಸೇನೆ ಘಟನ ಪ್ರದೇಶವನ್ನು ಸುತ್ತುವರಿದಿದೆ.

ಶ್ರೀನಗರದ ಹೊರವಲಯದಲ್ಲಿ ಝೆವಾನ್ ಪೊಲೀಸ್ ಪ್ರಧಾನ ಕಛೇರಿ ಕಡೆಗೆ ಹೋಗುವ ರಸ್ತೆಯಲ್ಲಿ ಸಶಸ್ತ್ರ ಪೊಲೀಸ್ ಬಸ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ ನಂತರ ಕನಿಷ್ಠ 3 ಯೋಧರು ಮೃತಪಟ್ಟು, 11 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.