Wednesday, 14th May 2025

ಮೃತ ಯೋಧರ ಪಾರ್ಥಿವ ಶರೀರವಿದ್ದ ಆಂಬುಲೆನ್ಸ್ ಅಪಘಾತ

AmbulanceAccident

ಚೆನ್ನೈ: ಕನೂರು ಬಳಿಯಲ್ಲಿ ಐಎಎಫ್ ಮಿಗ್-17 ಹೆಲಿಕಾಪ್ಟರ್ ನಲ್ಲಿ ದುರಂತ ದಲ್ಲಿ ಮೃತಪಟ್ಟ ಯೋಧರ ಪಾರ್ಥಿವ ಶರೀರ ಕೊಂಡೊಯ್ಯುತ್ತಿದ್ದ ಆಂಬುಲೆನ್ಸ್ ಮೆಟ್ಟುಪಾಳ್ಯಂನಲ್ಲಿ ಅಪಘಾತಕ್ಕೀಡಾಗಿ, ಪೊಲೀಸರು ಸಣ್ಣಪುಟ್ಟ ಗಾಯಗೊಂಡರು.

ತಮಿಳುನಾಡಿನ ಕುನೂರು ಬಳಿ ಹೆಲಿಕಾಪ್ಟರ್ ದುರಂತದಲ್ಲಿ ಮೃತರ ಪಾರ್ಥೀವ ಶರೀರವನ್ನು ಸುಲೂರು ಏರ್ ಬೇಸ್ ಗೆ ಆಂಬುಲೆನ್ಸ್ ಮೂಲಕ ಕೊಂಡೊಯ್ಯ ಲಾಗುತ್ತಿತ್ತು. ಈ ವೇಳೆ ಆಂಬುಲೆನ್ಸ್ ಅಪಘಾತಗೊಂಡಿದೆ.

ಹೆಲಿಕಾಪ್ಟರ್ ದುರಂತದಲ್ಲಿ ಮೃತ ಪಟ್ಟ ಯೋಧರ ಪಾರ್ಥಿವ ಶರೀರವನ್ನು ದೆಹಲಿಗೆ ಸುಲೂರ್ ಏರ್ ಬೇಸ್ ನಿಂದ ವಿಮಾನದ ಮೂಲಕ ದೆಹಲಿಗೆ ಕೊಂಡೊಯ್ಯಲಾಗುತ್ತಿದೆ. ಇದಕ್ಕಾಗಿ ಆಂಬುಲೆನ್ಸ್ ಮೂಲಕ ಪಾರ್ಥೀವ ಶರೀರಗಳನ್ನು ಏರ್ ಬೇಸ್ ಗೆ ಕೊಂಡೊಯ್ಯಲಾಗುತ್ತಿತ್ತು.