Sunday, 11th May 2025

ಕಾಮಗಾರಿ ಉದ್ಘಾಟನೆ: ತೆಂಗಿನಕಾಯಿ ಹೋಳಾಗಲಿಲ್ಲ, ರಸ್ತೆಯಲ್ಲಿ ಬಿತ್ತು ಬಿರುಕು !

ಬಿಜನೂರು: ಉತ್ತರಪ್ರದೇಶದ ಬಿನೂರಿನಲ್ಲಿ ಕೋಟಿಗಟ್ಟಲೆ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ರಸ್ತೆ ಉದ್ಘಾಟನೆಯ ವೇಳೆ ನಡೆದ ಅವಘಡದಿಂದಾಗಿ ರಸ್ತೆ ಕಾಮಗಾರಿಯ ಉಸ್ತುವಾರಿ ವಹಿಸಿಕೊಂಡ ಗುತ್ತಿಗೆದಾರ, ಇಂಜಿನಿಯರ್‌ ಸೇರಿದಂತೆ ಇತರರಿಗೆ ಗ್ರಹಚಾರ ತಂದಿಕ್ಕಿದೆ.

ಸುಮಾರು 1.16 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ರಸ್ತೆಯನ್ನು ಬಿಜನೂರಿನಲ್ಲಿ ನಿರ್ಮಿಸಲಾಗಿದೆ. ಈ ಸಂದರ್ಭದಲ್ಲಿ ಅದರ ಉದ್ಘಾಟನೆಗೆಂದು ಸ್ಥಳೀಯ ಬಿಜೆಪಿ ಶಾಸಕಿ ಸುಚಿ ಮೌಸಂ ಚೌಧರಿರನ್ನು ಆಹ್ವಾನಿಸಲಾಗಿತ್ತು. ಉದ್ಘಾಟನೆ ಸಂದರ್ಭದಲ್ಲಿ ತೆಂಗಿನ ಕಾಯಿ ಒಡೆಯಲು ಅದನ್ನು ರಸ್ತೆಗೆ ಕುಟ್ಟಿದ್ದಾರೆ.

ಆದರೆ ತೆಂಗಿನಕಾಯಿ ಒಡೆಯಲಿಲ್ಲ, ಬದಲಿಗೆ ರಸ್ತೆ ಬಿರುಕು ಬಿಟ್ಟಿತು! ಶಾಸಕಿ ಮುಜು ಗರಕ್ಕೆ ಒಳಗಾಗಿ ಕಳಪೆ ಕಾಮಗಾರಿಯಿಂದ ಗರಂ ಆದರು. ಕೂಡಲೇ ರಸ್ತೆಯ ಕಳಪೆ ಕಾಮಗಾರಿಗೆ ಕಾರಣವಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಘೋಷಿಸಿಯೇ ಬಿಟ್ಟರು.

ಸುಮಾರು ಮೂರು ಗಂಟೆ ಅಲ್ಲಿಯೇ ಇದ್ದು, ಕಳಪೆ ಮಟ್ಟದ ಕಾಮಗಾರಿ ತನಿಖೆಗಾಗಿ ರಸ್ತೆ ಮಾದರಿ ಸಂಗ್ರಹಿಸಲು ಅಧಿಕಾರಿ ಗಳನ್ನು ಕರೆಸಿಕೊಂಡರು.