Tuesday, 13th May 2025

ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಕಟ್ಟುನಿಟ್ಟಾದ ಕ್ವಾರಂಟೈನ್‌ ?

ನವದೆಹಲಿ: ಟೀಮ್ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸದ ಮೇಲೆ ಒಮಿಕ್ರಾನ್ ಕರಿನೆರಳು ಬಿದ್ದಂತಿದೆ.

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮುಗಿದ ನಂತರ ಟೀಂ ಇಂಡಿಯಾ ಡಿ.8 ಅಥವಾ 9 ರಂದು ದಕ್ಷಿಣ ಆಫ್ರಿಕಾಕ್ಕೆ ತೆರಳ ಬೇಕಾಗಿದೆ. ಈ ಪಂದ್ಯಗಳು ಜೋಹಾನ್ಸ್ ಬರ್ಗ್, ಸೆಂಚುರಿಯನ್, ಪರ್ಲ್ ಮತ್ತು ಕೇಪ್ ಟೌನ್‌ನಲ್ಲಿ ನಾಲ್ಕು ಸ್ಥಳಗಳಲ್ಲಿ ನಡೆಯ ಲಿವೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸರಣಿಯನ್ನು ಒಂದು ವಾರ ವಿಳಂಬವಾಗಿ ಶುರು ಮಾಡುವ ಬಗ್ಗೆ ಚರ್ಚೆಯಾಗುತ್ತಿವೆ. ಎರಡೂ ಮಂಡಳಿಗಳು ಪರಸ್ಪರ ಸಂಪರ್ಕ ದಲ್ಲಿವೆ. ಒಮಿಕ್ರಾನ್ ಸೋಂಕಿನ ಸಂಖ್ಯೆಯನ್ನು ನಾವು ಗಮನಿಸುತ್ತಿದ್ದೇವೆಂದು ಹೇಳಿ ದ್ದಾರೆ.

ಒಮಿಕ್ರಾನ್ ರೂಪಾಂತರದ ಸುದ್ದಿ ಹೊರಬಿದ್ದ ನಂತರ ಟೀಮ್ ಇಂಡಿಯಾದ, ದಕ್ಷಿಣ ಆಫ್ರಿಕಾ ಪ್ರವಾಸ ರದ್ದುಗೊಳಿಸಲು ಬಯಸುವುದಿಲ್ಲ ಎಂದು ಬಿಸಿಸಿಐ ಈಗಾಗಲೇ ಹೇಳಿದೆ. ಎಲ್ಲಾ ಭಾರತೀಯ ಆಟಗಾರರು ಕಟ್ಟುನಿಟ್ಟಾದ ಕ್ವಾರಂಟೈನ್‌ಗೆ ಒಳಗಾಗುವ ಸಾಧ್ಯತೆಯಿದೆ.

ಭಾರತ – ದಕ್ಷಿಣ ಆಫ್ರಿಕಾ 2021-22 ಪೂರ್ಣ ವೇಳಾಪಟ್ಟಿ:

1 ನೇ ಟೆಸ್ಟ್ -ಡಿಸೆಂಬರ್ 17-21

2 ನೇ ಟೆಸ್ಟ್- ಡಿಸೆಂಬರ್ 26-30

3 ನೇ ಟೆಸ್ಟ್ -ಜನವರಿ 3-7

ಮೊದಲ ಏಕದಿನ ಪಂದ್ಯ – ಜನವರಿ 11

2ನೇ ಏಕದಿನ ಪಂದ್ಯ – ಜನವರಿ 14

3ನೇ ಏಕದಿನ ಪಂದ್ಯ – ಜನವರಿ 16

1ನೇ ಟಿ20 – ಜನವರಿ 19

2ನೇ ಟಿ20 -ಜನವರಿ 21

3 ನೇ ಟಿ20 – ಜನವರಿ 23

4ನೇ ಟಿ20 – ಜನವರಿ 26