Sunday, 11th May 2025

ಆನೆಗಳು ರೈಲ್ವೇ ಹಳಿ ಕ್ರಾಸ್ ಮಾಡದಂತೆ ಬೇಲಿ: ಉಭಯ ರಾಜ್ಯಗಳ ನಿರ್ಧಾರ

Fencing to Railway Track

ಕೊಯಮತ್ತೂರು: ಕೇರಳ- ತಮಿಳು ನಾಡು ಅರಣ್ಯಾಧಿಕಾರಿಗಳು ಮತ್ತು ರೈಲ್ವೆ ಇಲಾಖೆಯು ಕಾಂಜಿಕ್ಕೋಡ್ ಮತ್ತು ಮದುಕ್ಕರೈ ರೈಲು ಮಾರ್ಗದಲ್ಲಿ ಆನೆಗಳು ರೈಲ್ವೇ ಹಳಿ ಕ್ರಾಸ್ ಮಾಡದಂತೆ ಬೇಲಿ ಹಾಕಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಆನೆಗಳುರೈಲಿಗೆ ಸಿಕ್ಕಿ ಮೃತಪಡುತ್ತಿರುವ ಘಟನೆಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಯಲ್ಲಿ ಈ ಯೋಜನೆಗೆ ಅಸ್ತು ಹೇಳಿದ್ದಾರೆ. ರೈಲ್ವೇ ಹಳಿಗಳಿಗೆ ಬೇಲಿ ಹಾಕುವು ದರಿಂದ ಆನೆಗಳನ್ನು ರೈಲ್ವೇ ಹಳಿಯಿಂದ ದೂರವಿಡಬಹುದು ಎನ್ನುವುದು ಕರ್ನಾಟಕದ ನಾಗರಹೊಳೆಯಲ್ಲಿನ ರೈಲು ಬೇಲಿಯನ್ನು ಕೇರಳ ಅರಣ್ಯಾಧಿ ಕಾರಿಗಳು ಉದಾಹರಿಸಿದ್ದಾರೆ.

ಸುಮಾರು 25 ಕಿ.ಮೀ ಉದ್ದದ ರೈಲು ಮಾರ್ಗದಲ್ಲಿ ಬೇಲಿ ಹಾಕಲಾಗುತ್ತಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಈ ಮಾರ್ಗದಲ್ಲಿ ರಾತ್ರಿಯ ರೈಲು ಪ್ರಯಾಣವನ್ನು ನಿರ್ಬಂಧಿಸುವುದೇ ಪರಿಹಾರ ಎನ್ನುವುದನ್ನು ಪರಿಸರಪ್ರೇಮಿಗಳು ಪುನರುಚ್ಛರಿಸಿ ದ್ದಾರೆ.