Thursday, 15th May 2025

ಓಮಿಕ್ರಾನ್ ವೈರಸ್ ದಾಳಿ: ತಮಿಳುನಾಡಿನಲ್ಲಿ ಹೈ ಅಲರ್ಟ್

Omicrone

ಚೆನ್ನೈ: ಓಮಿಕ್ರಾನ್ ವೈರಸ್ ದಾಳಿ ಇಡುತ್ತಿರುವ ಮುನ್ಸೂಚನೆ ಹಿನ್ನೆಲೆಯಲ್ಲಿ ತಮಿಳು ನಾಡಿನಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಈ ನಿಟ್ಟಿನಲ್ಲಿ ತಮಿಳುನಾಡು ಆರೋಗ್ಯ ಇಲಾಖೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ಕಳುಹಿಸಿದ್ದು, ಓಮಿಕ್ರಾನ್ ವಿಷಯವಾಗಿ ಉನ್ನತ ಮಟ್ಟದ ನಿಗಾ ವಹಿಸುವುದು ತೀರಾ ಅವಶ್ಯಕ ಎಂದು ತಿಳಿಸಿದೆ.

ವಿಮಾನ ನಿಲ್ದಾಣಗಳಲ್ಲಿ ಹೆಚ್ಚು ತಪಾಸಣಾ ಘಟಕಗಳನ್ನು ತೆರೆಯಲು ಆದೇಶಿಸ ಲಾಗಿದ್ದು, ವಿದೇಶಗಳಿಂದ ತಮಿಳುನಾಡಿಗೆ ಬಂದವರನ್ನು ಟ್ಯ್ರಾಕ್ ಮಾಡಿ, ಅವರ ಆರೋಗ್ಯ ಪರೀಕ್ಷೆ ಮಾಡಲು ಸೂಚಿಸಲಾಗಿದೆ.

‘ಈಗಾಗಲೇ ಓಮಿಕ್ರಾನ್ ವಿಷಯವಾಗಿ ಕೇಂದ್ರ ಸರ್ಕಾರದಿಂದ ಸಲಹೆ ಸೂಚನೆಗಳನ್ನು ಸ್ವೀಕರಿಸಿದ್ದೇವೆ. ಆ ನಿಟ್ಟಿನಲ್ಲಿ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಹೈ ಅಲರ್ಟ್ ಕೊಟ್ಟಿದ್ದು, ವಿದೇಶದಿಂದ ಬಂದವರನ್ನು ತಪಾಸಣೆ ಮಾಡಲು ಕೇಂದ್ರ ನೀಡಿದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ’ ಎಂದು ತಮಿಳುನಾಡು ಆರೋಗ್ಯ ಸಚಿವ ಸುಬ್ರಮಣಿಯನ್ ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಓಮಿಕ್ರಾನ್ ಎಂಬ ರೂಪಾಂತರಿ ಕೊರೊನಾ ವೈರಸ್ ಕಾಣಿಸಿಕೊಂಡಿದ್ದು, ಇದನ್ನು ವಿಶ್ವ ಆರೋಗ್ಯ ಸಂಸ್ಥೆ ಅತ್ಯಂತ ಅಪಾಯಕಾರಿ ಎಂದು ಗುರುತಿಸಿದೆ.