Thursday, 15th May 2025

33ನೇ ವರ್ಷಕ್ಕೆ ಕಾಲಿಟ್ಟ ನಟಿ ಯಾಮಿ

ಮುಂಬೈ: ಬಾಲಿವುಡ್ ನಟಿ ಯಾಮಿ ಗೌತಮ್, ವಿಕ್ಕಿ ಡೋನರ್‌, ಉರಿ ಮುಂತಾದ ಚಿತ್ರಗಳಿಂದ ಮನೆ ಮಾತಾದವರು.

ಇತ್ತೀಚೆಗಷ್ಟೇ, ವಿವಾಹವಾದ ನಟಿ ಯಾಮಿ, ಅವರಿಗೆ ಇದು ಮೊದಲ ಹುಟ್ಟು ಹಬ್ಬ. ಇಂದಿಗೆ 33ನೇ ವರ್ಷಕ್ಕೆ ಕಾಲಿಟ್ಟರು.

ವಿಕ್ಕಿ ಡೋನರ್‌’ನಲ್ಲಿ ಆಯುಷ್ಮಾನ್‌ ಖುರಾನಾ ಹಾಗೂ ಉರಿಯಲ್ಲಿ ವಿಕ್ಕಿ ಕೌಶಲ್‌ ರೊಂದಿಗೆ ನಟಿಸಿದ್ದಾರೆ. ಬಾಲಾ ಮೂವಿಯಲ್ಲೂ ಆಯುಷ್ಮಾನ್‌ ರೊಂದಿಗೆ ತೆರೆ ಹಂಚಿಕೊಂಡಿದ್ದರು. ಸಾಮಾಜಿಕ ಜಾಲತಾನದಲ್ಲಿ ಯಾಮಿ ಅವರಿಗೆ ಶುಭಾಶಯಗಳು ಹರಿದು ಬರುತ್ತಿವೆ.