Wednesday, 14th May 2025

ಕನ್ನಡದ ಪರ ನಿಲ್ಲದ ಸರಕಾರದ ವಿರುದ್ದ ಹೋರಾಟಕ್ಕೂ ಸಿದ್ದ

ವಿಶ್ವವಾಣಿ ಕ್ಲಬ್‌ ಹೌಸ್ ಸಂವಾದ – ೧೪೧

ಮಹಿಳಾ ಸಾಹಿತಿಗೆ ಸಮ್ಮೇಳನ ಸರ್ವಾಧ್ಯಕ್ಷ ಸ್ಥಾನ ನೀಡುವ ಗುರಿ

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ವಿಜೇತರಾಗಿರುವ ನಾಡೋಜ ಮಹೇಶ್ ಜೋಶಿ

ಬೆಂಗಳೂರು: ಕನ್ನಡದ ಸ್ಥಾನಮಾನಕ್ಕೆ ಧಕ್ಕೆಯಾದಾಗ ಸರಕಾರ ಕೈಕಟ್ಟಿ ಕುಳಿತರೆ ಸರಕಾರದ ವಿರುದ್ಧ ಹೋರಾಟ ಮಾಡುವಲ್ಲಿ ಮೊದಲಿಗ ನಾನು. ಆಡಳಿತಾತ್ಮಕವಾಗಿ ಸಮಸ್ಯೆಗಳಿಗೆ ಪರಿಹಾರ ದೊರಕದಿದ್ದಾಗ ನ್ಯಾಯಾಂಗದ ಮೊರೆ ಹೋಗಲು ಹಿಂಜರಿಯುವುದಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್
ಅಧ್ಯಕ್ಷ ಸ್ಥಾನದ ವಿಜೇತರಾಗಿರುವ ನಾಡೋಜ ಮಹೇಶ್ ಜೋಶಿ ತಿಳಿಸಿದ್ದಾರೆ.

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಗಡಿನಾಡ ಮತ್ತು ಹೊರ ನಾಡು ಕನ್ನಡಿಗರು ನೆಲೆಸುವ  ದೇಶದಲ್ಲಿ ಶಾಲೆಗಳು ದುಸ್ಥಿತಿಯಲ್ಲಿದೆ. ಅಲ್ಲಿನ ಸರಕಾರದ ಜತೆ ಚರ್ಚಿಸಿ ಶಾಲೆ ಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಅಖಿಲ ಭಾರತೀಯ ಸಾಹಿತ್ಯ ಸಮ್ಮೇಳನಗಳಲ್ಲಿ ಮಹಿಳೆಯರಿಗೆ ಪ್ರಾಧಾನ್ಯತೆಯಿಲ್ಲ ಎಂಬ ಕೂಗು ಕೇಳಿ ಬಂತು.

ಐದು ಸಮ್ಮೇಳನ ಒಂದರಲ್ಲಿ ಮಹಿಳೆಯರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಲಾಗುವುದು. ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳು ಅನೇಕ ಜಿಲ್ಲೆಗಳಲ್ಲಿ ನಡೆದಿಲ್ಲ. ಮೂಢನಂಬಿಕೆಗೆ ತಿಲಾಂಜಲಿ ಹೇಳುತ್ತಾ ಚಾಮರಾಜ ನಗರದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಮಾಡಲಾಗುತ್ತದೆ. ಸಾಮಾಜಿಕ, ಪ್ರಾದೇಶಿಕ, ಪ್ರತಿಭಾ ನ್ಯಾಯ ಎತ್ತಿ ಹಿಡಿಯಲಾಗುತ್ತದೆ ಎಂದು ಹೇಳಿದರು.

ಕರುಳು ತುಂಬುವ ಭಾಷೆಯಾಗಬೇಕು. ಕನ್ನಡ ಉದ್ಯೋಗ ನೀಡುವ, ಅನ್ನ ನೀಡುವ ಭಾಷೆಯಾಗಬೇಕು. ಶೇ.75ರಷ್ಟು ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲು ಕೇವಲ ಭರವಸೆ ಅಲ್ಲದೆ ಅನುಷ್ಠಾನಗೊಳಿಸುವ ಕೆಲಸ ಮಾಡಲಾಗುತ್ತದೆ. 252 ತಾಲೂಕುಗಳಲ್ಲಿ ಕನ್ನಡದ ಭವನಗಳನ್ನು ನಿರ್ಮಿಸಲಾಗುತ್ತದೆ. ಕನ್ನಡದ ಸೇವಕನಾಗಿ ಕೆಲಸ ಮಾಡುತ್ತೇನೆ. ಕನ್ನಡ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ ಆಗಿ ಪರಿವರ್ತಿಸಲಾಗುತ್ತದೆ. ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡದ ಅಭಿವೃದ್ಧಿ ಪ್ರಾಧಿಕಾರ, ಸಾಹಿತ್ಯ ಅಕಾಡೆಮಿ ಇದೆ.

ಆದರೂ ಕನ್ನಡ ಸಾಹಿತ್ಯ ಪರಿಷತ್ತಿಗೆ ಸಾಕಷ್ಟು ಗೌರವವಿದೆ ಎಂದು ಮಾಹಿತಿ ನೀಡಿದರು. ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಘನತೆಯ ಜತೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್.ಎಂ.ವಿಶ್ವೇಶ್ವರಯ್ಯ ಅವರು ಆಧಾರ ಸ್ಥಂಬಗಳು. ಅಖಿಲ ಭಾರತೀಯ ಸಮ್ಮೇಳನಗಳು ನಡೆದವು. ಸಾರಸ್ವತ ಲೋಕದಲ್ಲಿ ನಕ್ಷತ್ರ ಪುಂಜಗಳು ಮೇಳಗಳು. ಆಳವಾದ ವಿಚಾರಗಳು ನಡೆಯುತ್ತಿದ್ದವು. ಅನುದಾನ ಕಡಿಮೆ ಸಿಗುತ್ತಿತ್ತು. ಪರಿಷತ್ತಿಗೆ ಸ್ವಂತ ವಾಹನ, ದೂರವಾಣಿ ಇರಲಿಲ್ಲ ಎಂಬ ಕಸಾಪದ ೧೦೭ ವರ್ಷಗಳ ಇತಿಹಾಸವನ್ನು ಮೆಲುಕು ಹಾಕಿದರು.

ಸಾಹಿತ್ಯ ಸಮ್ಮೇಳನದ ಬಗ್ಗೆ ಸೌಹಾರ್ದಯುತ ಚರ್ಚೆ ನಡೆಯುತ್ತಿತ್ತು. ನಿರ್ಣಯಗಳನ್ನು ಅನುಷ್ಠಾನಕ್ಕೆ ತರುತ್ತಿದ್ದರು. ಜೀವಂತ ಹಾಗೂ ಬೆಳೆಯುತ್ತಿ
ರುವ ಪರಿಷತ್ ವಿಸ್ತಾರವಾಗಿ ಮುಂದುವರಿದಿದೆ. ಪ್ರಜಾಪ್ರಭುತ್ವದಲ್ಲಿ ಸ್ಪರ್ಧೆಗಳು ಅನಿವಾರ್ಯ. ಹಾಗಾಗಿ ಕಸಾಪ ಚುನಾವಣೆ ನಡೆದಿದೆ. ಪ್ರತಿಸ್ಪಽಗಳು ಸಹಸ್ಪತ್ರಿಗಳು ಚುನಾವಣೆ ಯಲ್ಲಿ ಯಾರ ಮೇಲೆ ಕನ್ನಡಗಿರ ಆಶಿರ್ವಾದ ಇದೆ. ನನ್ನ ಜತೆ 21 ಸ್ಪರ್ಧಿಗಳು ಇದ್ದರು. ಎಲ್ಲರನ್ನೂ ಗೌರವಿಸುತ್ತೇನೆ. ನಾನು ಗೆಲ್ಲುವ ವಿಶ್ವಾಸವಿತ್ತು. ನಾನು ಸರಳವಾಗಿದ್ದ ಕಾರಣ ಹೆಚ್ಚು ಮತಗಳ ಅಂತರದಿಂದ ಗೆದ್ದೆ ಎಂದರು.

ಒಂದು ಕೋಟಿ ಸದಸ್ಯರನ್ನಾಗಿಸುವ ಗುರಿ
ಮತದಾರರು ನನ್ನಿಂದ ನಿರೀಕ್ಷೆ ಇಟ್ಟಿದ್ದಾರೆ. ಕ್ರಾಂತಿಕಾರ ಬದಲಾವಣೆ ಮಾಡಲಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ಜನ ಸಾಮಾನ್ಯರ ಕನ್ನಡ ಸಾಹಿತ್ಯ ಪರಿಷತ್ತು ಜನಪರ ಪರಿಷತ್ ಆಗಲು ಸಾಮಾನ್ಯ ಜನರನ್ನು ತಲುಪಬೇಕು. ಕಸಾಪ ಲಾಭದ ಉದ್ದೇಶ, ವಾಣಿಜ್ಯ ಚಟುವಟಿಕೆಯಿಂದ ಕೂಡಿರುವ ಸಂಸ್ಥೆ ಯಲ್ಲ. ಸೇನೆ, ಅರೆ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಾಗೂ ಹಾಗೂ ನಿವೃತ್ತರಾದ ಸೈನಿಕರ ಮನೆಗೆ ಹೋಗಿ ಸಾಹಿತ್ಯ ಪರಿಷತ್ತಿನ ಸದಸ್ಯರಾಗಲು ಕೋರ ಲಾಗುತ್ತದೆ. ದಿವ್ಯಾಂಗ ಚೇತನರ ಮನೆಗೂ ಹೋಗಿ ಸದಸ್ಯತ್ವ ಪಡೆಯಲಾಗುತ್ತದೆ. ಕರ್ನಾಟಕ ಒಂದು ಕೋಟಿ ಸದಸ್ಯರನ್ನು ತಲುಪಲು ಆಪ್ ಅಭಿವೃದ್ಧಿ ಪಡಿಸಲಾಗುತ್ತದೆ. ಸಾಹಿತ್ಯ ಪರಿಷತ್ತಿನ ಮತದಾರರ ಪಟ್ಟಿಯಲ್ಲಿ ಅನೇಕ ಲೋಪದೋಷಗಳಿವೆ. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯ ಮೂರ್ತಿಗಳ ಸಮಿತಿ ನೇಮಕ ಮಾಡಿ ಅನೇಕ ಲೋಪದೋಷಗಳನ್ನು ಪರಿಷ್ಕರಣೆ ಮಾಡಲಾಗುತ್ತದೆ. ಮೃತಪಟ್ಟ ಸದಸ್ಯರನ್ನು ಪಟ್ಟಿಯಲ್ಲಿ ಕೈಬಿಡುವ ಚರ್ಚೆ ನಡೆಸಲಾ ಗುತ್ತದೆ ಎಂದು ಮಹೇಶ್ ಜೋಶಿ ತಿಳಿಸಿದರು.

ನೂತನ ಯೋಜನೆಗಳೇನು?
ಕಸಾಪ ಸಂಪೂರ್ಣ ಚಟುವಟಿಕೆ ಆಪ್ ಮೂಲಕ ದೊರೆಯಲಿದೆ.
ಮಾಹಿತಿ ಹಕ್ಕು ಕಾಯಿದೆಯಲ್ಲಿ ಅರ್ಜಿ ಹಾಕುವ ಅವಶ್ಯಕತೆ ಇರುವುದಿಲ್ಲ. ಎಲ್ಲವೂ ಸಹ ಪಾರದರ್ಶಕ
ಕಸಾಪ ಲೋಪದೋಷ ಸರಿ ಮಾಡಿಕೊಳ್ಳಲು ಕಾಲಮಿತಿ ನಿಗದಿಪಡಿಸಲಾಗುತ್ತದೆ.
ಸಾಮಾಜಿಕ, ಪ್ರಾದೇಶಿ ಪ್ರತಿಭಾ ನ್ಯಾಯ ಎತ್ತಿ ಹಿಡಿಯಲಾಗುತ್ತದೆ.
ಸೇನೆ, ಅರೆ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಾಗೂ ಹಾಗೂ ನಿವೃತ್ತರಾದ ಸೈನಿಕರಿಗೆ ಸದಸ್ಯತ್ವ
ಕಸಾಪ ಚುನಾವಣೆಯ ಹಾಗೂ ಆಡಳಿತಾತ್ಮಕ ಬದಲಾವಣೆಗಳು