ಕ್ಲಬ್ ಹೌಸ್ ಸಂವಾದ – 140
ಕ್ಲಬ್ಹೌಸ್ನಲ್ಲಿ ಚಿಂತಕ ಪಾವಗಡ ಪ್ರಕಾಶ್ ಅವರಿಂದ ಅರಿವಿನ ಉಪನ್ಯಾಸ
ಬೆಂಗಳೂರು: ಯೋಗ ಎನ್ನುವುದು ಸಮಾಧಿ ಎಂದು ಹೇಳಿದ ಮೇಲೆ, ಅದಕ್ಕೆ ಎಂಟು ಅಂಗಗಳಿವೆ. ಎಂಟು ಅಂಗಗಳ ಅಧ್ಯಯನ ಮಾಡಿದರೆ, ಇವೆಲ್ಲವನ್ನೂ ಅಳವಡಿಸಿಕೊಂಡರೆ ಜಗತ್ತು ರೋಗ ರಹಿತ, ಸ್ವಾರ್ಥರಹಿತ, ಧ್ವೇಷರಹಿತವಾಗಿರುತ್ತದೆ. ಈ ಅಷ್ಟಾಂಗ ಯೋಗದ ಅನುಷ್ಠಾನವೇ ನಮ್ಮ ಜೀವನ ಮೌಲ್ಯಗಳಾಗಿವೆ ಎಂದು ಚಿಂತಕ ಡಾ. ಪಾವಗಡ ಪ್ರಕಾಶ್ ತಿಳಿಸಿದರು.
ವಿಶ್ವವಾಣಿ ಕ್ಲಬ್ಹೌಸ್ನಲ್ಲಿ ಮಾನವೀಯ ಮೌಲ್ಯಗಳು ಎಂಬ ಅರಿವಿನ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಷ್ಟಾಂಗ ಯೋಗದ ಮೂಲಕ ಕಾರ್ಯ ಪ್ರವೃತ್ತರಾದರೆ, ಇಂತಹವರ ಸಂಖ್ಯೆ ಹೆಚ್ಚಾದರೆ, ನಿರ್ವೈರ್ಯ ಸಮಾಜ ನಿರ್ಮಾಣವಾಗು ತ್ತದೆ. ವಸುದೈವ ಕುಟುಂಬಕಂ ಎಂಬ ಸಿದ್ಧಾಂತದಡಿ ನಾವೆಲ್ಲ ಬದುಕಬೇಕಿದೆ. ಇಲ್ಲಿ ನಮ್ಮ ನಮ್ಮೊಳಗೆ ವೈಮನಸ್ಸು ಬೇಕಿಲ್ಲ. ಯೋಗ ಅನುಷ್ಠಾನ ಮಾಡಿದರೆ ರೋಗ ಹೋಗುತ್ತದೆ. ಯೋಗ ಅನುಷ್ಠಾನದಿಂದ ಜ್ಞಾನ ವೃದ್ಧಿಸುತ್ತದೆ. ಇಂತಹ ಜ್ಞಾನ ಮೂಡಿ ದಾಗ ಸ್ನೇಹದಿಂದ ಬದುಕಲು ಸಾಧ್ಯವಾಗುತ್ತದೆ. ಹೀಗೆ ಬದುಕಲು ಸಾಧ್ಯವಾದರೆ, ವಿಶ್ವವೇ ಸ್ನೇಹದಿಂದ ಕೂಡಿರುತ್ತದೆ. ಇಂತಹ ಸ್ಥಿತಿ ನಿರ್ಮಾಣ ವಾಗುವುದೇ ನಮ್ಮೊಳಗಿನ ಮಾನವೀಯ ಮೌಲ್ಯಗಳು ವೃದ್ಧಿಯಾದಾಗ ಮಾತ್ರ ಸಾಧ್ಯ ಎಂದರು.
ಯೋಗ ಸಿದ್ಧಾಂತದಲ್ಲಿ ಪತಂಜಲಿ ಮಹರ್ಷಿ ಐದು ಮಹತ್ತರ ವಿಚಾರಗಳನ್ನು ಹೇಳಿ ದ್ದಾರೆ. ಅಹಿಂಸೆ, ಸತ್ಯ, ಅಸ್ಥೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ ಪ್ರಮುಖವಾದವು. ಈ ಐದು ಅಂಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡು ನಡೆದರೆ, ನಮ್ಮ ಬಾಳು ಬಂಗಾರವಾಗುತ್ತದೆ. ಸಮಾಜಮುಖಿ ಚಿಂತನೆಗಳೊಂದಿಗೆ ನಾವು ಜೀವನ ನಡೆಸಲು ಈ ಅಂಶಗಳು ಸಹಕಾರಿಯಾಗುತ್ತವೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಯೋಚನೆ ಮಾಡಬೇಕಾದ ಅನಿವಾರ್ಯತೆ ನಮಗಿದೆ ಎಂದು ತಿಳಿಸಿದರು.
ಅಹಿಂಸೆಗೆ ಅಪರಾವತಾರ ಗಾಂಽಜಿ: ಯೋಗದ ಮುಖ್ಯ ಅಂಶಗಳಲ್ಲಿರುವ ಸತ್ಯ ಎಂಬುದು ಅಹಿಂಸೆ ನಂತರ ಬಂದಿದೆ. ಅಹಿಂಸೆ ಎಂಬ ಪದ ಕೇಳಿದೊಡನೆ ನೆನಪಿಗೆ ಬರಬೇಕಾದ ಚಿತ್ರ ಎಂದರೆ ಮಹಾತ್ಮಾ ಗಾಂಧಿ. ಅವರು ಅಹಿಂಸೆಯನ್ನು ಒಂದು ವೃತವಾಗಿ ಆಚರಿಸಿದರು. ಅಹಿಂಸೆ ಎಂಬುದು ಪ್ರಪಂಚ ಆವರೆಗೆ ಕಂಡಿರದ ನಿಶ್ಯಸ್ತ್ರವಾದ ಒಂದು ಅಸ್ತ್ರ.
ಬ್ರಿಟೀಷರ ಮುಂದೆ ಯುದ್ಧ ಮಾಡಲು ನಮ್ಮ ಬಳಿ, ಅವರಷ್ಟು ಶಸಾಸ ಇರಲಿಲ್ಲ. ಅವರ ಮುಂದೆ ನಾವು ಯುದ್ಧಕ್ಕೆ ನಿಂತಿದ್ದರೆ ನಾನು ಸೋಲುತ್ತಿದ್ದೆವು. ಆದರೆ, ಮಾಹಾತ್ಮ ಗಾಂಽ ಅಹಿಂಸಾ ವೃತ ತೊಟ್ಟರು. ಅವರು ನಮ್ಮ ಕಲ್ಪನೆಗೆ ಬರದ ಋಷಿ ಪರಂಪರೆ ಸೃಷ್ಟಿಸಿದರು. ನೀನು ಹೊಡೆದರು, ನಾನು ವಾಪಸ್ ಹೊಡೆಯುವುದಿಲ್ಲ ಎಂದು ನಿಂತರು. ಈಗ ಕೆಲವರು ಅಹಿಂಸೆಯನ್ನು ಹಾಸ್ಯ ಮಾಡುತ್ತಾರೆ. ಗಾಂಧಿಯಿಂದ ಸ್ವಾತಂತ್ರ್ಯ ಬರಲಿಲ್ಲ ಎನ್ನುತ್ತಾರೆ. ಹೀಗೆ ಹೇಳುವ ಮೂಲಕ ಗಾಂಧಿಯವರ ಅಹಿಂಸಾವೃತವನ್ನು ಅವಹೇಳನ ಮಾಡುವಂತಿಲ್ಲ. ಅವರಿಗೆ ಸ್ವಾತಂತ್ರ್ಯ ಹೋರಾಟ ದಲ್ಲಿ ದೊಡ್ಡ ಸಿಂಹಾಸನವೇ ಇದೆ ಎಂದು ಡಾ. ಪಾವಗಡ ಪ್ರಕಾಶ್ ಅವರು ತಿಳಿಸಿದರು.
ಯೋಗಕ್ಕೆ ವಿಶ್ವಮಾನ್ಯತೆ ತಂದ ಯೋಗಿ, ಮೋದಿ: ಯೋಗದ ಆಚರಣೆ ಸನಾತನವಾದರೂ, ಜೂನ್.೨೧ರಂದು ಯೋಗ ದಿನ ಎಂದು ವಿಶ್ವಸಂಸ್ಥೆಯಲ್ಲಿ ಅನೇಕ ರಾಷ್ಟ್ರಗಳು ಒಪ್ಪಿಕೊಂಡಿವೆ. ಇದರ ಫಲಿತ ಯೋಗಿಯಾದ ಮೋದಿ ಅವರು ವಿಶ್ವಸಂಸ್ಥೆ ಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿ, ಅತ್ಯಧಿಕ ಮತಗಳಿಂದ ಅನುಷ್ಠಾನಕ್ಕೆ ತಂದರು.
ಅನೇಕ ವಾಮಪಂಥ ಚಿಂತನೆಯ ರಾಷ್ಟ್ರಗಳಲ್ಲಿಯೂ ಕೂಡ ಯೋಗ ವನ್ನು ಅನುಷ್ಠಾನಕ್ಕೆ ತಂದರು. ಇದು ಭಾರತದ ವಿಕ್ರಮ ವಾಗಿ ಮಾರ್ಪಟ್ಟಿತು. ಭಾರತೀಯರಾಗಿ ಯೋಗ ಮಾಡಿದರೆ, ನಮ್ಮ ಪಕ್ಕದಲ್ಲಿರುವವರ ಜತೆಗೆ, ಬದುಕಲು ಸಾಧ್ಯವಾದರೆ, ಸ್ವಸ್ಥ ಸಮಾಜ ನಿರ್ಮಾಣ, ಸಮಾಧಿಯುತ ಸಮಾಜದ ನಿರ್ಮಾಣವಾಗುತ್ತದೆ. ಆಗ ಮಾನವೀಯ ಮೌಲ್ಯ ಮಹತ್ತರವಾಗಿ ವೃದ್ಧಿಸುತ್ತವೆ ಎಂಬುದರಲ್ಲಿ ಸಂಶಯವಿಲ್ಲ. ಮಾನವೀಯ ಮೌಲ್ಯ ವೃದ್ಧಿಗೂ ಯೋಗಾಂಗ ನುಷ್ಠಾನಕ್ಕೂ ಬಹಳ ಸಾಮ್ಯತೆಯಿದೆ ಎಂದು ಅವರು ತಿಳಿಸಿದರು.
***
ಅತಿ ಕಡಿಮೆ ಸಂಖ್ಯೆಯಲ್ಲಿದ್ದ ಕನ್ನಡ ಪತ್ರಿಕೆಗಳ ಸಂಖ್ಯೆ ಹೆಚ್ಚಲು ವಿಶ್ವೇಶ್ವರ ಭಟ್ ಅವರ ಪ್ರಯೋಗಶೀಲ ಪತ್ರಿಕೋದ್ಯಮ ಕಾರಣ. ವಿಜಯ ಕರ್ನಾಟಕದ ಮೂಲಕ ಅಂತಹ ಕ್ರಾಂತಿ ಮಾಡಿದರು. ಅವರು ಕನ್ನಡಪ್ರಭ ಸಂಪಾದಕರಾಗಿದ್ದ ಭಗವಾನ್
‘ಭಗವದ್ಗೀತೆ’ ಬಗ್ಗೆ ಮಾತನಾಡಿದಾಗ ನನ್ನ ಎರಡು ಲೇಖನ ಪ್ರಕಟ ಮಾಡಿದ್ದರು. ಹೀಗಾಗಿ ನಾನು ಅವರಿಗೆ ಋಣಿಯಾಗಿದ್ದೇನೆ.
– ಡಾ. ಪಾವಗಡ ಪ್ರಕಾಶ್ ಅಧ್ಯಾತ್ಮಿಕ ಚಿಂತಕರು
ಮುಖ್ಯಾಂಶಗಳು
ಯೋಗದ ಎಂಟು ಅಂಗಗಳ ಅಧ್ಯಯನ ಮಾಡಿದರೆ ಜಗತ್ತು ರೋಗ ರಹಿತ, ಸ್ವಾರ್ಥ ರಹಿತವಾಗುತ್ತದೆ
ವವಸುದೈವ ಕುಟುಂಬಕಂ ಎಂಬ ಸಿದ್ಧಾಂತದಡಿ ನಾವೆಲ್ಲರೂ ಬದುಕಬೇಕಿದೆ.
ಬೌದ್ಧರ ಜಾತಕ ಕತೆಯಲ್ಲಿ ರಾಮಾಯಣದ ಉಲ್ಲೇಖ ಹೊಂದಿದೆ. ಜೈನರ ಕೃತಿಗಳಲ್ಲೂ ರಾಮಾಯಣ ಇದೆ
ಶ್ರೀರಾಮನ ಬದುಕು ಸತ್ಯಕ್ಕಾಗಿ ಮೀಸಲಿಟ್ಟಿತ್ತು.
ಇಡೀ ಪ್ರಪಂಚ ಶ್ರೀರಾಮನನ್ನು ಗೌರವಿಸಲು ಅವರಲ್ಲಿರುವ ಸತ್ಯ, ಧರ್ಮವೇ ಕಾರಣ
ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನ ದಿನಗಳಲ್ಲಿ ಶ್ರೀರಾಮನ ಸಾಕ್ಷಾತ್ಕಾರ ಮಾಡಿದ್ದಾರೆ
ನಮ್ಮಲ್ಲಿರುವ ಮಾನವೀಯ ಮೌಲ್ಯಗಳು ವೃದ್ಧಿಯಾದರೆ ವಿಶ್ವವೇ ಸ್ನೇಹದಿಂದ ಕೂಡಿರುತ್ತದೆ.