Saturday, 17th May 2025

ಡಿಸೆಂಬರ್‌ನಲ್ಲಿ ಬರಲಿದ್ದಾರೆ ಗೋಪಿಕೆಯರು

ವಿಭಿನ್ನ ಕಥಾಹಂದರ ಹೊಂದಿರುವ ಎರಡು ಸಾವಿರದ ಇಪ್ಪತ್ತು ಗೋಪಿಕೆಯರು ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು, ಡಿಸೆಂಬರ್ ಹತ್ತರಂದು ಬಿಡುಗಡೆಯಾಗಲಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಪ್ರವೀಣ್ ಸೂದ್ ಹಾಡುಗಳನ್ನು ಬಿಡುಗಡೆ ಮಾಡು ಶುಭ ಕೋರಿ ದರು. ಈಗಿನ ಕಾಲದ ಮಾಡರ್ನ್ ಹೆಣ್ಣು ಮಕ್ಕಳ ಕುರಿತಾದ ಕಥೆಯಿದು.

ಹೆಣ್ಣಿನ ಮನಸ್ಸಿನ ತುಮುಲಗಳನ್ನು ತೋರಿಸುವ ಪ್ರಯತ್ನ ಮಾಡಿದ್ದೇವೆ. ಕುಚ್ಚಣ್ಣ ಶ್ರೀನಿವಾಸ್ ಹಾಗೂ ನಾನು ಸೇರಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದೇವೆ. ನಿರ್ದೇಶನ ನಾನೇ ಮಾಡಿದ್ದೇನೆ. ನಾನು ಈ ಹಿಂದೆ ಮಧುಮಾಸ ಎಂಬ ಸಿನಿಮಾ ನಿರ್ದೇಶನ ಮಾಡಿದ್ದೆ.

ಅದು ರಮೇಶ್ ಅರವಿಂದ್ ಅವರು ನಾಯಕರಾಗಿ ನಟಿಸಿದ್ದ ಮೊದಲ ಸಿನಿಮಾ. ಈಗ ನನ್ನ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ ಎಂದರು ನಿರ್ದೇಶಕ ನಾರಾಯಣಸ್ವಾಮಿ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಶ್ರೀಧರ್ ವಿ ಸಂಭ್ರಮ ನಿರ್ದೇಶನದಲ್ಲಿ ಮೂಡಿ ಬಂದಿವೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಬಾಲಾಜಿ ಶರ್ಮ, ಪ್ರಿಯಾಂಕಾ ಚಿಂಚೋಳಿ ನಟಿಸಿದ್ದಾರೆ.

Leave a Reply

Your email address will not be published. Required fields are marked *