Thursday, 15th May 2025

ನಟ ಸೂರ್ಯನನ್ನು ಒದ್ದವರಿಗೆ ಬಹುಮಾನ ಘೋಷಣೆ: ಪ್ರಕರಣ ದಾಖಲು

ಚೆನ್ನೈ: ತಮಿಳು ನಟ ಸೂರ್ಯ ಅವರಿಗೆ ಒದ್ದವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದ ಪಿಎಂಕೆ ನಾಯಕನ ವಿರುದ್ಧ ಮೈಲಾಡುತುರೈ ಪೊಲೀಸರು ಬುಧವಾರ ಕೇಸ್ ದಾಖಲಿಸಿದ್ದಾರೆ.

ತಮಿಳು ನಟ ಸೂರ್ಯ ಅವರ ಚಿತ್ರ ‘ಜೈ ಭೀಮ್’ ಯಶಸ್ವಿಯಾದ ಬೆನ್ನಲ್ಲೇ ರಾಜಕೀಯ ಪಕ್ಷದ ಟೀಕೆಗೆ ಗುರಿಯಾಗಿದೆ. ಎ.ಪಳನಿಸಾಮಿ ವಿರುದ್ಧ ಐದು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

 

ಜೈ ಭೀಮ್ ಚಿತ್ರದಲ್ಲಿ ವನ್ನಿಯಾರ ಪಾತ್ರಕ್ಕೆ ಅಪವಾದವೆಂಬಂತೆ ಪಿಎಂಕೆ ಕಾರ್ಯ ಕರ್ತರು ಇತ್ತೀಚೆಗಷ್ಟೇ ಸೂರ್ಯ ಅಭಿನ ಯದ ಚಿತ್ರವೊಂದರ ಪ್ರದರ್ಶನಕ್ಕೆ ಅಡ್ಡಿಪಡಿಸಿದ್ದರು. ಚಿತ್ರದಲ್ಲಿ ಪಕ್ಷದ ಮಾನ ಹಾನಿ ಮಾಡುವ ಪ್ರಯತ್ನ ನಡೆದಿದೆ ಎಂದು ಪಿಎಂಕೆ ನಾಯಕರು ಆರೋಪಿಸಿದ್ದಾರೆ.

ಏತನ್ಮಧ್ಯೆ, ಪಳನಿಸಾಮಿ ಅವರು ಮೈಲಾಡುತುರೈಗೆ ಬಂದಾಗ ಸೂರ್ಯ ಅವರನ್ನು ಒದೆಯುವವರಿಗೆ ನಗದು ಬಹುಮಾನ ಘೋಷಿಸಿದ್ದರು. ಸೂರ್ಯ ಅಭಿನಯದ ಜೈ ಭೀಮ್ ಚಿತ್ರವನ್ನು ಟಿ.ಜೆ. ಜ್ಞಾನವೇಲ್ ಮತ್ತು ಸ್ವತಃ ನಟ ಮತ್ತು ಅವರ ಪತ್ನಿ ಜ್ಯೋತಿಕಾ ನಿರ್ಮಿಸಿ ದ್ದಾರೆ. 

Leave a Reply

Your email address will not be published. Required fields are marked *