Saturday, 17th May 2025

ಮುಗಿಲ್‌ಪೇಟೆಯಲ್ಲಿ ಪ್ರೇಮಕಾವ್ಯ

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನು, ಮುಗಿಲ್ ಪೇಟೆ ಮೂಲಕ ಹೊಸ ಪ್ರೇಮಕಾವ್ಯ ಬರೆಯಲು ಸಿದ್ಧವಾಗಿದ್ದಾರೆ. ಆ ಮೂಲಕ ಚಂದನವನದಲ್ಲಿ ಯಶಸ್ಸಿನ ಹೆಜ್ಜೆಯಿಡಲು ಸಜ್ಜಾಗಿದ್ದಾರೆ.

ಮನು ಅಭಿನಯದ ಮುಗಿಲ್ ಪೇಟೆಗೆ ಸೆನ್ಸಾರ್ ಮಂಡಳಿ ಕೂಡ ಅಸ್ತು ಎಂದಿದ್ದು, ಯು/ಎ ಪ್ರಮಾಣ ಪತ್ರ ನೀಡಿದೆ. ಹಾಗಾಗಿ ನವೆಂಬರ್ 19ರಂದು ಚಿತ್ರ ಅದ್ಧೂರಿಯಾಗಿ ತೆರೆಗೆ ಬರಲಿದೆ. ಮುಗಿಲ್ ಪೇಟೆ ನನ್ನ ಕನಸಿನ ಚಿತ್ರ. ಇಡೀ ಸಿನಿಮಾ ತಂಡದ ಶ್ರಮದ ಫಲವಾಗಿ ಇಂದು ನಮ್ಮ ಚಿತ್ರ ಬಿಡುಗಡೆ ಹಂತಕ್ಕೆ ಬಂದಿದೆ. ಸಂಬಂಧಗಳಿಗೆ ಬೆಲೆ ಕೊಡುವ ಕುಟುಂಬವೊಂದು. ಸಂಬಂಧಗಳನ್ನು ಕಡೆಗಾಣಿಸುವ ಕುಟುಂಬ ಮತ್ತೊಂದು. ಈ ಎರಡು ಕುಟುಂಬದ ಎರಡು ಜೀವಗಳ ನಡುವೆ ಪ್ರೀತಿ ಮೂಡಿದಾಗ ಏನಾಗುತ್ತದೆ ಎಂಬುದೆ ಮುಗಿಲ್ ಪೇಟೆಯ ಕಥಾವಸ್ತು.

ಇದು ಒಂದು ಜಾನರ್‌ನ ಸಿನಿಮಾ ಅಲ್ಲ. ಕೌಟುಂಬಿಕ ಸನ್ನಿವೇಶ, ಪ್ರೀತಿ, ಸಾಹಸ, ಉತ್ತಮ ಹಾಸ್ಯ ಎಲ್ಲವೂ ನಮ್ಮ ಸಿನಿಮಾ ದಲ್ಲಿದೆ. ತೊಂಬತ್ತು ದಿನಗಳ ಕಾಲ ಬೆಂಗಳೂರು, ಚಿಕ್ಕಮಗಳೂರು, ಹಾಸನ, ಸಕಲೇಶ ಪುರ, ಕುಂದಾಪುರ, ತೀರ್ಥಹಳ್ಳಿ ಮುಂತಾದ ಕಡೆ ಚಿತ್ರೀಕರಣ ನಡೆಸಿದ್ದೇವೆ. ಮುಗಿಲ್ ಪೇಟೆ ಬಿಡುಗಡೆಯ ಹಂತಕ್ಕೆ ತಲುಪಿದೆ ಎಂದರು ನಿರ್ದೇಶಕ ಭರತ್.ಎಸ್.ನಾವುಂದ್.

ಕನಸು ನನಸಾಗಿದೆ ಸಿನಿಮಾದಲ್ಲಿ ನಟಿಸಬೇಕು ಎಂಬುದು ನನ್ನ ಬಹುದಿನಗಳ ಕನಸಾ ಗಿತ್ತು. ಈಗ ಅದು ಈಡೇರಿದೆ. ಅಪ್ಪನನ್ನು ತೆರೆಯಲ್ಲಿ ನೋಡಿದಾಗಲೆಲ್ಲ, ನನಗೂ ಅಪ್ಪನಂತೆ ನಟಿಸಬೇಕು ಆಸೆಯಾಗುತ್ತಿತ್ತು. ಅಂತು ಆ ಆಸೆ ಈಗ ಈಡೇರಿದೆ. ನಿರ್ದೇಶ ಕರು ನನಗಾಗಿ ಉತ್ತಮ ಕಥೆ ಹೆಣೆದಿದ್ದಾರೆ. ಅಂದುಕೊಂಡಂತೆ ಚಿತ್ರೀಕರಣವನ್ನು ಮುಗಿಸಿದ್ದಾರೆ, ನನ್ನ ಚಿತ್ರವನ್ನು ತೆರೆಯಲ್ಲಿ ಕಣ್ತುಂಬಿಕೊಳ್ಳಬೇಕು ಎಂದು ನಾನು ಕಾಯುತ್ತಿದ್ದೇನೆ.

ಚಿತ್ರದ ತುಣುಕು ಹಾಗೂ ಹಾಡುಗಳನ್ನು ಅಪ್ಪನಿಗೆ ತೋರಿಸಿದೆ. ಅವರು ಇಷ್ಟಪಟ್ಟರು ಎಂದು ಸಂತಸಗೊಂಡರು ಮನು. ದಾಖಲೆಯ ಹೊಸ್ತಿಲಲ್ಲಿ ಸಾಧುಕೋಕಿಲ ಸಾಧು ಕೋಕಿಲ ಸಿನಿಮಾದಲ್ಲಿದ್ದಾರೆ ಎಂದ ಮೇಲೆ ಆ ಚಿತ್ರದಲ್ಲಿ ಭರಪೂರ ಹಾಸ್ಯವಿದೆ ಎಂಬುದು ಖಚಿತ. ಮುಗಿಲ್ ಪೇಟೆ ಚಿತ್ರದಲ್ಲೂ ಸಾಧು ಬಣ್ಣಹಚ್ಚಿದ್ದಾರೆ. ವಿಶೇಷ ಎಂದರೆ ಇದೇ ಮೊದಲ ಬಾರಿಗೆ ಸಾಧು
ಹದಿನೇಳು ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರತಂಡದವರು ಇದನ್ನು ಲಿಮ್ಕಾ ದಾಖಲೆಗೆ ಕಳುಹಿಸುತ್ತೇವೆ ಎನ್ನುತ್ತಿದ್ದಾರೆ. ಅದು ಸಂತೋಷ ತಂದಿದೆ.

ಆದರೆ ಯಾವ ಪಾತ್ರಗಳು ಅಂತ ಈಗ ಹೇಳುವುದಿಲ್ಲ ಚಿತ್ರದಲ್ಲೇ ನೋಡಿ ಆನಂದಿಸಿ ಎಂದು ಕುತೂಹಲ ಹೆಚ್ಚಿಸಿದರು ಸಾಧು ಕೋಕಿಲ. ಹಿರಿಯ ನಟ ರಂಗಾಯಣ ರಘು ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ಮನುಗೆ ಜತೆಯಾಗಿ ಖಯಾದು ಅಭಿನಯಿಸಿ ದ್ದಾರೆ. ನಿರ್ಮಾಪಕಿ ರಕ್ಷಾ ವಿಜಯಕುಮಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

Leave a Reply

Your email address will not be published. Required fields are marked *