ರಾಂಚಿ:
ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತವರು ನಗರಿ ರಾಂಚಿಯಲ್ಲಿ ಬ್ಯಾಾಟಿಂಗ್ ಅಭ್ಯಾಾಸ ನಡೆಸಿದ್ದಾಾರೆ. ಆದರೆ, ಅವರು ಮುಂದಿನ ತಂಗಳು ವೆಸ್ಟ್ ಇಂಡೀಸ್ ವಿರುದ್ಧ ತವರು ಸರಣಿಗೆ ಅಲಭ್ಯರಾಗಿದ್ದಾಾರೆ. ನ್ಯೂಜಿಲೆಂಡ್ ವಿರುದ್ಧ ಐಸಿಸಿ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದ ಬಳಿಕ ಎಂ.ಎಸ್ ಧೋನಿ ಸ್ಪರ್ಧಾತ್ಮಕ ಕ್ರಿಿಕೆಟ್ನಿಂದ ದೂರ ಉಳಿದಿದ್ದರು. ಇದರೊಂದಿಗೆ ಅವರ ಕ್ರಿಿಕೆಟ್ ವೃತ್ತಿಿ ಜೀವನ ಬಹುತೇಕ ಮುಗಿದಂತೆ ಎಂದು ಎಲ್ಲರು ಭಾವಿಸಿದ್ದರು. ಆದರೆ, ಗುರುವಾರ ರಾಂಚಿ ಜೆಎಸ್ಸಿಎ ಕ್ರೀಡಾಂಗಣದಲ್ಲಿ ಅಭ್ಯಾಾಸದಲ್ಲಿ ತೊಡಗುವ ಮೂಲಕ ಕ್ರಿಿಕೆಟ್ ಗಾಳಿ ಸುದ್ದಿಯನ್ನು ಸುಳ್ಳಾಾಗಿಸಿದರು. ಜತೆಗೆ, ಮತ್ತೆೆ ಟೀಮ್ ಇಂಡಿಯಾಗೆ ಮರಳುವ ಮುನ್ಸೂಚನೆ ನೀಡಿದರು. ಆದರೆ. ವಿಂಡೀಸ್ ವಿರುದ್ಧದ ಮೂರು ಪಂದ್ಯಗಳ ಟಿ-20 ಹಾಗೂ ಏಕದಿನ ಸರಣಿಗೆ ಅವರು ಅಲಭ್ಯರಾಗಿದ್ದಾಾರೆ.
‘‘ಮುಂದಿನ ಡಿ. 6ರಿಂದ ಆರಂಭವಾಗುವ ವೆಸ್ಟ್ ಇಂಡೀಸ್ ವಿರುದ್ಧದ ಸೀಮಿತ ಓವರ್ಗಳ ಸರಣಿಗೆ ಎಂ.ಎಸ್ ಧೋನಿ ಲಭ್ಯರಿಲ್ಲ.’’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾಾರೆ.
==