Saturday, 17th May 2025

ಪ್ರೇಮ ಕಾವ್ಯ ಬರೆಯಲಿದೆ ಪ್ರೇಮಂ ಪೂಜ್ಯಂ

ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ ಪ್ರೇಮಂ ಪೂಜ್ಯಂ ಬಿಡುಗಡೆಗೆ ರೆಡಿಯಾಗಿದೆ. ಬಹು ವರ್ಷಗಳ ಬಳಿಕ ಪ್ರೇಮ್ ಮತ್ತೆ ಲವ್ವರ್ ಬಾಯ್ ಆಗಿ ತೆರೆಗೆ ಬರಲು ಸಿದ್ಧವಾಗಿದ್ದಾರೆ. ಈಗಾಗಲೇ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿದೆ.

ಬರೋಬ್ಬರಿ ೧೦ ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಕಂಡಿದೆ. ಇದೊಂದು ಅಪ್ಪಟ ಪ್ರೇಮಕಥೆ ಎನ್ನುವುದು ಟೈಟಲ್ ನಲ್ಲೇ ಸ್ಪಷ್ಟವಾಗಿತ್ತು. ಈಗ ಬಿಡುಗಡೆ ಯಾಗಿರುವ ಟ್ರೇಲರ್ ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. ಕ್ಯೂಟ್ ಲುಕ್‌ನಲ್ಲಿ ಪ್ರೇಮ್ ಮಿಂಚಿದ್ದಾರೆ. ನಾನು ಬಹುದಿನಗಳಿಂದಲೂ ಇಂತಹ ಪಾತ್ರಕ್ಕಾಗಿ ನಿರೀಕ್ಷಿಸಿದ್ದೆ. ಮತ್ತೊಮ್ಮೆ ಪ್ರೇಮಕಥೆಯಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿದೆ. ನನ್ನ ಇಪ್ಪತ್ತೈದನೇ ಚಿತ್ರವಾಗಿ ಪ್ರೇಮಂ ಪೂಜ್ಯ ಮೂಡಿಬಂದಿರುವುದು ಸಂತಸ ತಂದಿದೆ ಎನ್ನುತ್ತಾರೆ ಪ್ರೇಮ್. ಈ ಚಿತ್ರದಲ್ಲಿ ಪ್ರೇಮ್ ಏಳು ಶೇಡ್ಸ್‌ಗಳಲ್ಲಿ ಮಿಂಚಿದ್ದಾರೆ. ಪ್ರೇಮ್‌ಗೆ ಜತೆಯಾಗಿ ಬೃಂದಾ ಆಚಾರ್ಯ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಐಂದ್ರಿತಾ ರೇ ಕಾಣಿಸಿಕೊಂಡಿದ್ದಾರೆ.

ಡೈರೆಕ್ಟರ್ ಆದ ಡಾಕ್ಟರ್
ಡಾ.ರಾಘವೇಂದ್ರ ನಿರ್ದೇಶನದಲ್ಲಿ ಪ್ರೇಮಂ ಪೂಜ್ಯಂ ಮೂಡಿಬಂದಿದೆ. ರಾಘವೇಂದ್ರ ವೃತ್ತಿಯಲ್ಲಿ ವೈದ್ಯರು. ಜತೆಗೆ ಸಿನಿಮಾದಲ್ಲಿಯೂ ಬಲು ಆಸಕ್ತಿ. ಪ್ರೇಕ್ಷಕರು ಮೆಚ್ಚುವ ಸಿನಿಮಾ ಕೊಡಬೇಕು ಎನ್ನುವ ಹಂಬಲ ಅವರ ಲ್ಲಿತ್ತು. ಅದು ಈ ಚಿತ್ರದ ಮೂಲಕ ನೆರವೇರಿದೆ. ಒಂದು ಓಪಿಡಿ ಕ್ಲಿನಿಕ್‌ನಲ್ಲಿ ಈ ಸಿನಿಮಾ ರೂಪು ತಳೆಯಿತು. ಮನಸಿನಲ್ಲಿ ಮೂಡಿದ ಕಥೆಯ ಒಂದು ಎಳೆ ನನ್ನನ್ನು ಬಿಡದೆ ಕಾಡಿತು. ಕಥೆಯ ಜತೆಗೆ ಪಾತ್ರವರ್ಗವೂ ಹಿಗ್ಗುತ್ತಾ ಹೋಯಿತು. ಮೊದಲು ಆನಂದ್, ಬಳಿಕ ಪ್ರೇಮ್ ಹೀಗೆ ಚಿತ್ರದ ಪಾತ್ರವರ್ಗವೂ ದೊಡ್ಡದಾಯಿತು.

ಅಂತು ಅಂದುಕೊಂಡಂತೆ ಚಿತ್ರ ಸಿದ್ಧವಾಗಿದೆ. ಬಹುವರ್ಷಗಳ ಶ್ರಮವಿದು. ಚಿತ್ರದ ಸಂಗೀತ, ಸಾಹಿತ್ಯ, ಛಾಯಾಗ್ರಹಣ ಎಲ್ಲವೂ ಪ್ರೇಕ್ಷಕರನ್ನು ಹೊಸ ಪ್ರಪಂಚಕ್ಕೆ ಕರೆದೊಯ್ಯಲಿದೆ. ಒಂದು ಅರ್ಥದಲ್ಲಿ ಈ ಸಿನಿಮಾ ಪ್ರೇಕ್ಷಕರಿಗೆ ಉಡುಗೊರೆಯಾಗಲಿದೆ ಎನ್ನುತ್ತಾರೆ ನಿರ್ದೇಶಕ ರಾಘವೇಂದ್ರ. ನಿರ್ದೇಶಕರೇ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಾಹಿತ್ಯ ಬರೆದಿದ್ದಾರೆ. ಮಾಸ್ಟರ್ ಆನಂದ್, ಸಾಧು ಕೋಕಿಲ, ಹಿರಿಯ ನಿರ್ದೇಶಕ ಟಿ.ಎಸ್.ನಾಗಾ ಭರಣ ಮತ್ತಿತರರು ಈ ಚಿತ್ರದಲ್ಲಿ ನಟಿಸಿದ್ದಾರೆ. ಡಾ.ರಕ್ಷಿತ್ ಕದಂಬಾಡಿ ಹಾಗೂ ಡಾ.ರಾಜ್‌ಕುಮಾರ್ ಜಾನಕಿರಾಮನ್ ಈ ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ.

ಪ್ರೇಮ ಕಾವ್ಯ ಬರೆಯಲಿದೆ
ಪ್ರೇಮಂ ಪೂಜ್ಯಂ
ಪ್ರಪಂಚದಲ್ಲಿ ಎಷ್ಟೋ ಯುದ್ದಗಳು ನಡೆದು ಹೋಗಿ ಪ್ರಪಂಚದಲ್ಲಿ ಎಷ್ಟೋ ಯುದ್ದಗಳು ನಡೆದುಹೋಗಿವೆ. ಇದರಿಂದ ಜರ್ಜರಿತವಾಗಿ, ಶಾಂತಿ, ನೆಮ್ಮದಿ ಅರಸಿ
ಹೊರಟಾಗ ಅದು ಪ್ರೀತಿಯಲ್ಲಿ ಸಿಗುತ್ತದೆ. ಅದನ್ನೇ ಪ್ರೇಮಂ ಪೂಜ್ಯ ಹೇಳಹೊರಟಿದೆ. ಪ್ರೀತಿಗೆ ದೈವಿಕ ಭಾವನೆ, ಹೊಸ ವ್ಯಾಖ್ಯಾನ ಕೊಡುವ ಸಿನಿಮಾವಿದು.
ನಾನು ೨೪ನೇ ಚಿತ್ರದಲ್ಲಿ ನಟಿಸಿದ ಬಳಿಕ ಸಿನಿಮಾ ಮಾಡೋದು ನಿಲ್ಲಿಸಬೇಕು ಅಂದುಕೊಂಡಿದ್ದೆ. ನನ್ನ ಮನಸಿಗೆ ಇಷ್ಟವಾಗುವಂಥ ಕಥೆ ಸಿಕ್ಕಿದರಷ್ಟೇ ನಟಿಸೋಣ ಎಂದು ನಿರ್ಧರಿಸಿದ್ದೆ. ಹೀಗಿರುವಾಗಲೇ ರಾಘವೇಂದ್ರ ಈ ಕಥೆ ಹೇಳಿದರು. ನನಗೂ ಕಥೆ ತುಂಬಾ ಹಿಡಿಸಿತು. ಇದಕ್ಕಿಂತ ಬೇರೆ ಕಥೆ ಸಿಗಲಾರದು ಎಂದು ಮನಸಿನಲ್ಲೇ ನಿರ್ಧರಿಸಿ ಚಿತ್ರದಲ್ಲಿ ನಟಿಸಲು ಸಂತಸದಿಂದಲೇ ಒಪ್ಪಿದೆ.
-ಪ್ರೇಮ್ ನಟ

Leave a Reply

Your email address will not be published. Required fields are marked *