Thursday, 15th May 2025

ರತ್ನಾಕರನ ಹೊಸ ಪ್ರಪಂಚ

ಡಾಲಿ, ಈ ಹೆಸರು ಸ್ಯಾಂಡಲ್‌ವುಡ್ ಮಂದಿಗೆ ಚಿರಪರಿಚಿತ. ಸಿನಿಪ್ರಿಯರಿಗಂತು ಈ ನಾಮಧೇಯ ಹೃದಯಕ್ಕೆ ಹತ್ತಿರ. ಹಾಗಾಗಿ ಡಾಲಿಯ ಸಿನಿಮಾಗಳು ಎಂದರೆ ಅಲ್ಲಿ ಅಬ್ಬರ ಇದ್ದೇ ಇರುತ್ತದೆ ಎಂಬುದು ಖಚಿತ. ತಮ್ಮ ನೆಚ್ಚಿನ ನಟನನ್ನು ತೆರೆಯಲ್ಲಿ ಕಣ್ತುಂಬಿಕೊಳ್ಳಬೇಕು ಎಂದು ಅಭಿಮಾನಿಗಳು ಕಾದು ಕುಳಿತ್ತಿರು ತ್ತಾರೆ.

ಈಗ ಧನಂಜಯ ಸ್ವಲ್ಪ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ಗೆಪಟ್‌ನಲ್ಲಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಅದು ರತ್ನಾಕರನಾಗಿ. ರತ್ನನ್ ಪ್ರಪಂಚದ ಮೂಲಕ ಹೊಸ ಪ್ರಪಂಚಕ್ಕೆ ಸಿನಿಪ್ರಿಯರನ್ನು ಕರೆದೊಯ್ಯುತ್ತಾರೆ. ರತ್ನನ್ ಪ್ರಪಂಚ ಓಟಿಟಿಯಲ್ಲಿ ತೆರೆಗೆ ಬಂದಿದೆ. ಏಕಕಾಲಕ್ಕೆ ವಿಶ್ವದಾದ್ಯಂತ ಪ್ರದರ್ಶನ ಕಾಣುತ್ತಿದೆ. ರತ್ನನ್ ಪ್ರಪಂಚದ ಅನಾವರಣ ಮಾಡಿದೆ. ಚಿತ್ರದ ಶೀರ್ಷಿಕೆ ಕೇಳಿದರೆ ಇದು ಕನ್ನಡದ ಕಟ್ಟಾಳುವಿನ ಕಥೆಯೆ ಎಂದು ಅನ್ನಿಸುತ್ತದೆ. ಆದರೆ ಸಿನಿಮಾದ ಟ್ರೇಲರ್ ನೋಡಿದರೆ ಇದು ಕಾಮನ್‌ಮ್ಯಾನ್ ಸ್ಟೋರಿ ಎಂಬುದು ಖಚಿತವಾಗುತ್ತದೆ.

ವಿ.ಸಿನಿಮಾಸ್ : ರತ್ನನ್ ಪ್ರಪಂಚದ ಮೂಲಕ ಏನು ಹೇಳಲು ಹೊರಟ್ಟಿದ್ದೀರ?
ಡಾಲಿ ಧನಂಜಯ: ತುಂಬಾ ಸರಳವಾಗಿ ಹೇಳಬೇಕೆಂದರೆ ರತ್ನನ್ ಪ್ರಪಂಚ ಕಾಮನ್ ಮ್ಯಾನ್ ಸ್ಟೋರಿ. ಇಲ್ಲಿ ನನ್ನ ಪಾತ್ರ ರತ್ನಾಕರ. ಆತ ಎಲ್ಲಾ ಕಡೆಯೂ ಇರುತ್ತಾನೆ. ಸಾಮಾನ್ಯ ನಾಗರೀಕನನ್ನು ಪ್ರತಿನಿಽಸುವ ಪಾತ್ರ ಇದು. ಚಿತ್ರ ನೋಡುತ್ತಿದ್ದರೆ ಪ್ರತಿಯೊಬ್ಬರ ಜೀವನದಲ್ಲಿ ನಡೆದ, ನಡೆಯುತ್ತಿರುವ ಘಟನೆಗಳು ಈ ಕಥೆಗೆ ಕನೆಕ್ಟ್ ಆಗುತ್ತದೆ.

ವಿ.ಸಿ : ಈ ಕಥೆ ಚಿತ್ರದ ಕಥೆಗೂ ನಿಮ್ಮ ಮುಂಚಿನ ಜೀವನಕ್ಕೂ ಸಾಮೀಪ್ಯವಿದೆ ಅನ್ನಿಸುತ್ತದೆಯೆ ? 
ಡಾಲಿ: ಖಂಡಿತಾ. ನನಗೆ ನಿರ್ದೇಶಕರು ಬಂದು ಕಥೆ ಹೇಳಿದಾಗ, ಇಂಟರೆಸ್ಟಿಂಗ್ ಅನ್ನಿಸಿತು. ಕಣ್ಣಲ್ಲಿ ನೀರು ಸುರಿಯಿತು. ಕಥೆಯಲ್ಲಿ ಒಳ್ಳೆಯ ಕಂಟೆಂಟ್ ಇದೆ ಅನ್ನುವುದು ಮನದಟ್ಟಾಯಿತು. ನಾನು ಕೂಡ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಿಂದ ಬಂದವನು. ಮೊದಲು ನೌಕರಿಯಲ್ಲಿದ್ದಾಗ ರತ್ನಾಕರನಂತೆಯೇ ಹೆಲ್ಮೆಟ್ ತೊಟ್ಟು, ಬೈಕ್‌ವೊಂದರಲ್ಲಿ ಓಡಾಡುತ್ತಿದ್ದೆ. ಮಾತ್ರವಲ್ಲ ಈ ಚಿತ್ರದಲ್ಲಿ ಬರುವ ಕಥೆ, ಸನ್ನಿವೇಶ ನನ್ನ ಜೀವನಕ್ಕೆ ಹೋಲುತ್ತದೆ. ಇದು ಎಲ್ಲಾ ಮಧ್ಯಮ ವರ್ಗದವರು ಕಥೆ ಅನ್ನಬಹುದು.

ವಿ.ಸಿ : ಈ ಹಿಂದೆ ರಗಡ್ ಲುಕ್‌ನಲ್ಲಿ ಮಿಂಚಿದ್ದೀರ, ಇಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀರ? ಈ ರೀತಿಯ ಪಾತ್ರವನ್ನು ಬಯಸಿದ್ದೀರ?
ಡಾಲಿ: ಟಗರು ಚಿತ್ರದ ಬಳಿಕ ಅಂತಹ ಪಾತ್ರಗಳಲ್ಲೇ ಅಭಿನಯಿಸಲು ಅವಕಾಶಗಳು ಬಂದವು. ಆದರೆ ನನಗೆ ಒಂದು ವಿಭಿನ್ನ ಪಾತ್ರದಲ್ಲಿ ನಟಿಸಬೇಕು ಎಂಬ ಆಸೆಯಿತ್ತು. ಆಗಲೇ ರತ್ನನ್ ಪ್ರಪಂಚ ತೆರೆದುಕೊಂಡಿತು. ಕಥೆಯಲ್ಲಿ ವಿಶೇಷತೆ ಇರುವುದು ತಿಳಿಯಿತು. ಅದಕ್ಕೂ ಮುಖ್ಯವಾಗಿ ರತ್ನಾಕರನ ಪಾತ್ರ ನನ್ನ ಮನಸಿಗೆ ತುಂಬಾ ಹಿಡಿಸಿತು. ಅದಕ್ಕಾಗಿಯೇ ಚಿತ್ರದಲ್ಲಿ ನಟಿಸಲು ಸಂತಸದಿಂದಲೇ ಒಪ್ಪಿದೆ.

ವಿ.ಸಿ : ರತ್ನಾಕರ ಚಿತ್ರಮಂದಿರಕ್ಕೆ ಬರಲಿಲ್ಲ ಏಕೆ?
ಡಾಲಿ: ಲಾಕ್‌ಡೌನ್ ಅವಧಿಯಲ್ಲಿ ಓಟಿಟಿಯಲ್ಲಿ ಸಾಕಷ್ಟು ಚಿತ್ರಗಳು ಬಿಡುಗಡೆಯಾದವು. ಮನರಂಜನೆ ನೀಡಿದವು. ಹಾಗಾಗಿ ಓಟಿಟಿಯಲ್ಲಿ ಸಿನಿಮಾ
ವೀಕ್ಷಿಸು ವವರ ಸಂಖ್ಯೆ ಜಾಸ್ತಿಯಾಗಿದೆ. ವಿಶ್ವದಾದ್ಯಂತ ಈ ಚಿತ್ರ ಪ್ರದರ್ಶನ ಗೊಳ್ಳಲಿದೆ. ಹಾಗಾಗಿಯೇ ಅಮೇಜಾನ್ ಪ್ರೈಮ್‌ನಲ್ಲಿ ಚಿತ್ರ ರಿಲೀಸ್ ಮಾಡಲಾಗಿದೆ.

Leave a Reply

Your email address will not be published. Required fields are marked *