ನೈನಿತಾಲ್ : ಉತ್ತರಾಖಂಡದಲ್ಲಿ ನಿರಂತರ ಮಳೆಯಿಂದಾಗಿ ನಿಲ್ಲಿಸಲಾದ ‘ಚಾರ್ ಧಾಮ್ ಯಾತ್ರೆ’ ಬುಧವಾರದಿಂದ ಪುನರಾರಂಭವಾಗಲಿದೆ.
ನೈನಿತಾಲ್ ನಲ್ಲಿ ರಾಜ್ಯದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ಅವರೊಂದಿಗೆ ಪರಿಶೀಲನಾ ಸಭೆ ಯಲ್ಲಿ ಭಾಗವಹಿಸಿದ ನಂತರ, ಪೊಲೀಸ್ ಮಹಾ ನಿರ್ದೇಶಕ ಅಶೋಕ್ ಕುಮಾರ್ , ‘ಗರ್ವಾಲ್ ಬಹುತೇಕ ನಿಯಂತ್ರಣದಲ್ಲಿದೆ. ಅಲ್ಲಿ ‘ಯಾತ್ರೆ’ ಸಹ ಪ್ರಾರಂಭಿಸಲಾಗಿದೆ. ಬದರೀನಾಥದ ಕೊನೆಯ ವಿಸ್ತರಣೆ ಬಿಟ್ಟು, ಜೋಶಿಮಠದಿಂದ ಬದರಿನಾಥ್ ವರೆಗೆ ತೆರೆಯಲಾಗಿದೆ ಮತ್ತು ‘ಚಾರ್ ಧಾಮ್ ಯಾತ್ರೆ’ ನಾಳೆ ಸಂಪೂರ್ಣವಾಗಿ ತೆರೆದುಕೊಳ್ಳಲಿದೆ ಎಂದು ಹೇಳಿದ್ದಾರೆ.
‘ನೈನಿತಾಲ್ ನಿಂದ ಸುಮಾರು 25 ಸಾವುನೋವುಗಳು ರಾಜ್ಯದಲ್ಲಿ ವರದಿಯಾಗಿವೆ. ‘ಪೊಲೀಸ್, SDRF, NDRF ತಂಡಗಳು ಪರಿಹಾರ ಕಾರ್ಯಾಚರಣೆ ಯಲ್ಲಿ ತೊಡಗಿವೆ ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ’ ಎಂದು ಡಿಜಿಪಿ ಹೇಳಿದರು.