Wednesday, 14th May 2025

ಕೇರಳದಲ್ಲಿ ಪ್ರವಾಹ, ಭೂಕುಸಿತ: 27 ಜನರ ಬಲಿ

ತಿರುವನಂತಪುರಂ: ಕೇರಳದಲ್ಲಿ ಪ್ರವಾಹ, ಭೂಕುಸಿತಕ್ಕೆ ಕಾರಣವಾದ ಧಾರಾಕಾರ ಮಳೆಗೆ ಇಲ್ಲಿಯ ವರೆಗೆ 27 ಜನರ ಜೀವವನ್ನು ಬಲಿಯಾಗಿದ್ದಾರೆ.

13 ಜನರು ಕೊಟ್ಟಾಯಂ ಜಿಲ್ಲೆಯಲ್ಲಿ, 10 ಮಂದಿ ಇಡುಕಿ ಜಿಲ್ಲೆಯಲ್ಲಿ ಸಾವನ್ನಪ್ಪಿದ್ದಾರೆ. ತಿರುವನಂ ಪುರಂ, ತ್ರಿಸೂರ್ ಮತ್ತು ಕೊಝಿಕೋಡ್ ಜಿಲ್ಲೆಯಲ್ಲಿ ತಲಾ ಒಬ್ಬರು ಮೃತಪಟ್ಟಿರುವುದಾಗಿ ವರದಿ ಯಾಗಿದೆ.

ಪ್ಲಾಪಲಿ ಸಂಭವಿಸಿದ ಭೂ ಕುಸಿತದಿಂದ ಮೃತ ಪಟ್ಟಿದ್ದ 13 ಜನರ ಮೃತದೇಹಗಳು ಪತ್ತೆಯಾಗಿದೆ. ಭೂ ಕುಸಿತದಿಂದಾಗಿ ನಾಲ್ಕು ಮನೆಗಳು ಸಂಪೂರ್ಣ ವಾಗಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಐವರು ಮಕ್ಕಳು, ಇಬ್ಬರು ಹದಿಹರದೆಯವರು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ.

2,169 ಕುಟುಂಬಗಳು 247 ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದು, ಒಟ್ಟಾರೇ 9,422 ಜನರು ಇಂತಹ ಪರಿಹಾರ ಕ್ಯಾಂಪ್ ಗಳಲ್ಲಿ ವಾಸಿಸುತ್ತಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.

ಪರಿಹಾರ ಶಿಬಿರಗಳಲ್ಲಿ ಸೂಕ್ತ ಮೂಲಸೌಕರ್ಯಗಳನ್ನು ಒದಗಿಸಬೇಕು, ಆಹಾರ, ಬಟ್ಟೆ ಮತ್ತು ಹಾಸಿಗೆ ವ್ಯವಸ್ಥೆಯನ್ನು ಪೂರೈಸಬೇಕೆಂದು ಮುಖ್ಯಮಂತ್ರಿ ಪಿಣರಾಯ್ ವಿಜಯನ್ ನಿರ್ದೇಶಿಸಿದ್ದಾರೆ. 

Leave a Reply

Your email address will not be published. Required fields are marked *