ದೆಹಲಿ:
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಒಂಬತ್ತು ವರ್ಷಗಳ ಕಾಲ ರಾಜಸ್ಥಾಾನ ರಾಯಲ್‌ಸ್ ತಂಡವನ್ನು ಪ್ರತಿನಿಧಿಸಿದ್ದ ಭಾರತ ಟೆಸ್‌ಟ್ ತಂಡದ ಉಪ ನಾಯಕ ಅಜಿಂಕ್ಯಾಾ ರಹಾನೆ ಅವರು ಇದೀಗ ಡೆಲ್ಲಿ ಕ್ಯಾಾಪಿಟಲ್‌ಸ್ ಸೇರುವುದು ಬಹುತೇಕ ಖಚಿತವಾಗಿದೆ. ಮತ್ತೊೊಂದೆಡೆ ಬೌಲಿಂಗ್ ಆಲ್‌ರೌಂಡರ್ ಕರ್ನಾಕಟದ ಕೆ.ಗೌತಮ್ ಅವರು ಕೂಡ ಕಿಂಗ್‌ಸ್ ಇಲೆವೆನ್ ತಂಡದ ಪರ ಮುಂದಿನ ಆವೃತ್ತಿಿಯಲ್ಲಿ ಜೆರ್ಸಿ ತೊಡಲಿದ್ದಾಾರೆ.
ಐಪಿಎಲ್ ಫ್ರಾಾಂಚೈಸಿ ತಂಡಗಳು ಆಟಗಾರರನ್ನು ಅದಲು-ಬದಲು ಮಾಡಿಕೊಳ್ಳುವ ಪ್ರಕ್ರಿಿಯೆ ಜೋರಾಗಿ ನಡೆಯುತ್ತಿಿದ್ದು, ಸ್ಟಾಾರ್ ಬ್ಯಾಾಟ್‌ಸ್‌ಮನ್ ಅಜಿಂಕ್ಯ ರಹಾನೆ ಅವರನ್ನು ತನ್ನ ತೆಕ್ಕೆೆಗೆ ತೆಗೆದುಕೊಳ್ಳುವಲ್ಲಿ ಡೆಲ್ಲಿ ಕ್ಯಾಾಪಿಟಲ್ಸ್ ತಂಡ ಭಾರತೀಯ ಕ್ರಿಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯಿಂದ ಒಪ್ಪಿಿಗೆಗೆ ಕಾಯುತ್ತಿಿದೆ.
ಐಪಿಎಲ್‌ನಲ್ಲಿ ಹೆಚ್ಚು ಅನುಭವಿ ಬ್ಯಾಾಟ್‌ಸ್‌ಮನ್ ಆಗಿರುವ ಅಜಿಂಕ್ಯ ಬದಲಾಗಿ ಡೆಲ್ಲಿ ಕ್ಯಾಾಪಿಟಲ್ಸ್ ತಂಡ, ರಾಜಸ್ಥಾಾನ ತಂಡಕ್ಕೆೆ ಲೆಗ್ ಸ್ಪಿಿನ್ನರ್ ಮಯಾಂಕ್ ಮಾರ್ಕಂಡೆ ಮತ್ತು ರಾಹುಲ್ ತೆವಾಟಿಯ ಅವರನ್ನು ಬಿಟ್ಟುಕೊಡಲಿದೆ.
ಈ ವಿಚಾರವಾಗಿ ಸುದ್ದಿ ಸಂಸ್ಥೆೆಯೊಡನೆ ಮಾತನಾಡಿರುವ ಡೆಲ್ಲಿ ಕ್ಯಾಾಪಿಟಲ್ಸ್ ತಂಡದ ಮೂಲಗಳು, ಈ ಒಪ್ಪಂದ ಬಹುತೇಕ ಖಾತ್ರಿಿಯಾಗಿರುವುದಾಗಿ ತಿಳಿಸಿವೆ. ಅಷ್ಟೇ ಅಲ್ಲದೆ ಶೀಘ್ರದಲ್ಲೇ ಅಧಿಕೃತ ಹೇಳಿಕೆ ಬಿಡುಗಡೆಯಾಗಲಿದೆ ಎಂದಿವೆ.
ಮತ್ತೊೊಂದೆಡೆ ರಹಾನೆ ಸಹ ಆಟಗಾರ ಕೆ.ಗೌತಮ್ ಅವರನ್ನು 2018ರ ಹರಾಜಿನಲ್ಲಿ 20 ಲಕ್ಷ ರು. ಮೂಲ ಬೆಲೆಯಲ್ಲಿ 6.2 ಕೋಟಿ ರು. ಮೊತ್ತಕ್ಕೆೆ ರಾಜಸ್ಥಾಾನ ರಾಯಲ್‌ಸ್ ಖರೀದಿಸಿತ್ತು. ಆರ್. ಅಶ್ವಿಿನ್ ಅವರು ಡೆಲ್ಲಿ ಕ್ಯಾಾಪಿಟಲ್‌ಸ್ ಗೆ ಬಿಟ್ಟುಕೊಟ್ಟಿಿರುವ ಪಂಜಾಬ್, ಬದಲಿಯಾಗಿ ಸ್ಪಿಿನ್ನರ್‌ಗೆ ಹೊತ್ತು ನೀಡಿರುವುದರಿಂದ ಕೆ.ಗೌತಮ್‌ಗೆ ಮಣೆ ಹಾಕಿದೆ.