Thursday, 15th May 2025

ಕರ್ನಾಟಕಕ್ಕೆ ಬಿಹಾರ್ ಸವಾಲು

ವಿಶಾಖಪಟ್ಟಣಂ:
ಸೈಯದ್ ಮುಷ್ತಾಾಕ್ ಅಲಿ ಟಿ-20 ಕ್ರಿಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತನ್ನ ಐದನೇ ಪಂದ್ಯದಲ್ಲಿ ಬಿಹಾರ್ ತಂಡವನ್ನು ಎದುರಿಸಲಿದ್ದು, ಅಗ್ರ ಸ್ಥಾಾನ ಭದ್ರ ಪಡಿಸಿಕೊಳ್ಳುವತ್ತ ನೆಟ್ಟಿಿದೆ.
ಕರ್ನಾಟಕ ಆಡಿರುವ 4 ಪಂದ್ಯಗಳಲ್ಲಿ 3 ಜಯದೊಂದಿಗೆ 12 ಅಂಕ ಕಲೆ ಹಾಕಿದ್ದು ಮೊದಲ ಸ್ಥಾಾನದಲ್ಲಿದೆ. ಬಿಹಾರ್ ಆಡಿರುವ ಮೂರು ಪಂದ್ಯಗಳನ್ನು ಸೋತು ಕೊನೆಯ ಸ್ಥಾಾನದಲ್ಲಿದೆ. ಕರ್ನಾಟಕದ ತಂಡದ ಪರ ದೇವದತ್ ಪಡಿಕ್ಕಲ್ ಭರ್ಜರಿ ಬ್ಯಾಾಟಿಂಗ್ ಪ್ರದರ್ಶಿಸಿದ್ದಾರೆ. ಆಡಿರುವ 4 ಪಂದ್ಯಗಳಲ್ಲಿ 255 ರನ್ ಕಲೆ ಹಾಕಿದ್ದಾಾರೆ. ಇದರಲ್ಲಿ ಎರಡು ಅರ್ಧಶತಕ ಹಾಗೂ ಒಂದು ಶತಕ ಸೇರಿದೆ.
ಆರಂಭಿಕ ರೋಹನ್ ಕದಂ ನಾಲ್ಕು ಪಂದ್ಯಗಳಲ್ಲಿ 129 ರನ್ ಮಧ್ಯಮ ಕ್ರಮಾಂಕದಲ್ಲಿ ಕರುಣ್ ನಾಯರ್, ಕೆ.ಗೌತಮ್, ಸಿಸೋಡಿಯಾ, ಶ್ರೇಯಸ್ ಗೋಪಾಲ್, ಆರ್.ಸಮರ್ಥ್ ಲಯಕ್ಕೆೆ ಮರಳುವ ಅನಿವಾರ್ಯತೆ ಇದೆ. ನಾಯಕ ಮನೀಶ್ ಪಾಂಡೆ ಕಳೆದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಉತ್ತಮ ಲಯದಲ್ಲಿದ್ದಾಾರೆ. ಇವರ ಜತೆ, ಟೀಮ್ ಇಂಡಿಯಾ ಮತ್ತೊೊರ್ವ ಆಟಗಾರ ಕೆ.ಎಲ್ ರಾಹುಲ್ ತವರು ತಂಡಕ್ಕೆೆ ಮರಳಿರುವುದು ಇನ್ನಷ್ಟು ಬಲ ಬಂದಂತಾಗಿದೆ.
ಬೌಲಿಂಗ್ ನಲ್ಲಿ ಶ್ರೇಯಸ್ ಗೋಪಾಲ್ 8 ವಿಕೆಟ್ ಕಬಳಿಸಿದ್ದಾರೆ. ವಿ.ಕೌಶಿಕ್ 5, ಕೆ.ಗೌತಮ್ ಹಾಗೂ ಅಬಿಮನ್ಯು ತಲಾ ಮೂರು ವಿಕೆಟ್ ಪಡೆದಿದ್ದಾರೆ. ಇನ್ನು ಬಿಹಾರ್, ಬ್ಯಾಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ಗೆಲುವು ಸಾಧಿಸಲು ಯೋಜನೆ ಹಾಕಿಕೊಂಡಿದೆ.

Leave a Reply

Your email address will not be published. Required fields are marked *