Wednesday, 14th May 2025

ಭಕ್ತರ ಮೆರವಣಿಗೆಯ ಮೇಲೆ ಹರಿದ ಕಾರು, ಒಬ್ಬನ ಸಾವು, 20 ಜನರಿಗೆ ಗಾಯ

ನವದೆಹಲಿ/ಛತ್ತೀಸಗಡ: ಮೆರವಣಿಗೆಯಲ್ಲಿ ದುರ್ಗಾ ವಿಗ್ರಹವನ್ನು ನಡೆದುಕೊಂಡು ಹೋಗುತ್ತಿದ್ದ ಭಕ್ತರ ಮೆರವಣಿಗೆಯ ಗುಂಪಿನ ಮೇಲೆ ಕಾರು ಹರಿದು ಒಬ್ಬರು ಮೃತಪಟ್ಟು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಛತ್ತೀಸ್ ಗಢದ ಜಶ್ಪುರ್ ಜಿಲ್ಲೆಯಲ್ಲಿ ಘಟನೆ ಸಂಭವಿಸಿದೆ.

ಜುಶ್ಬುರ್ ಜಿಲ್ಲೆಯಲ್ಲಿ ದಸರಾ ಹಬ್ಬದ ಪ್ರಯುಕ್ತ ದುರ್ಗಾ ಮಾತೆಯ ವಿಗ್ರಹವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಿದ್ದ ಜನರ ಮೇಲೆ ದಿಢೀರ್ ಕಾರು ನುಗ್ಗಿದೆ. ಇದರಿಂದಾಗಿ ಮೆರವಣಿಗೆಯಲ್ಲಿ ಸಾಗುತ್ತಿದ್ದ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಾರಿನಲ್ಲಿ ಒಂದು ಕ್ವಿಂಟಾಲ್ ಗಾಂಜಾ ತುಂಬಿತ್ತು ಎಂದು ಹೇಳಲಾಗಿದ್ದು, ಅಪಘಾತದಿಂದ ಕೋಪ ಗೊಂಡ ಜನರು ಪೊಲೀಸ್ ಠಾಣೆಗೆ ಘೇರಾವ್ ಹಾಕಿದ್ದಾರೆ. ಘಟನೆಯ ವಿಡಿಯೋ ಹೊರಬಂದಿದ್ದು, ಸುದ್ದಿ ತಿಳಿದ ತಕ್ಷಣ ಕಲೆಕ್ಟರ್ ಮತ್ತು ಎಸ್ಪಿ ಸ್ಥಳಕ್ಕೆ ಆಗಮಿಸಿದ್ದಾರೆ. ಇನ್ನು ಎಎಸ್‌ಐನ್ನ ಅಮಾನತುಗೊಳಿಸಲಾಗಿದೆ. ಕಾರಿನಲ್ಲಿದ್ದ 2 ಆರೋಪಿಗಳನ್ನ ಬಂಧಿಸಲಾಗಿದೆ.

 

Leave a Reply

Your email address will not be published. Required fields are marked *