Sunday, 11th May 2025

ಮದ್ಯ ಪ್ರಿಯರಿಗೆ ಶಾಕ್ ಕೊಟ್ಟ ದೆಹಲಿ ಸರ್ಕಾರ…!

ನವದೆಹಲಿ: ದೆಹಲಿಯಲ್ಲಿ ಅಕ್ಟೋಬರ್ 1 ರಿಂದ 45 ದಿನಗಳ ಕಾಲ ಖಾಸಗಿ ಲಿಕ್ಕರ್ ಶಾಪ್ , ಬಾರ್ ​ಗಳನ್ನು ಮುಚ್ಚಲು ಆದೇಶಿಸಿದ್ದು, ಮದ್ಯ ಪ್ರಿಯರಿಗೆ ಬಿಗ್‌ ಶಾಕ್‌ ಕೊಟ್ಟಿದೆ.

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಹೊಸ ಮದ್ಯ ನೀತಿಯ ಅನುಷ್ಟಾನ ಜಾರಿಗೆ ತಂದಿದ್ದು,  ಇದರ ಅನುಸಾರ ಅಕ್ಟೋಬರ್ 1ರಿಂದ ಖಾಸಗಿ ಲಿಕ್ಕರ್ ಶಾಪ್​ಗಳನ್ನು ತೆರೆಯುವಂತಿಲ್ಲ. ಅ.1ರಿಂದ ನವೆಂಬರ್ 17ರವರೆಗೆ ದೆಹಲಿಯಲ್ಲಿ ಲಿಕ್ಕರ್ ಅಥವಾ ಆಲ್ಕೋಹಾಲ್ ಮಾರಾಟ ಮಾಡುವಂತಿಲ್ಲ. ಅಕ್ಟೋಬರ್ 1ರಿಂದ ಸರ್ಕಾರ ನಡೆಸುವ ಮದ್ಯದಂಗಡಿಗಳನ್ನು ಮಾತ್ರ ತೆರೆಯಲಾಗುತ್ತದೆ. ಖಾಸಗಿ ಮದ್ಯದಂಗಡಿಗಳು ನವೆಂಬರ್ 17ರವರೆಗೆ ಮುಚ್ಚಲಿವೆ.

ಜಾರಿಯಲ್ಲಿರುವ ಮದ್ಯ ನೀತಿಯಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗುತ್ತಿದೆ. ಹೊಸ ನೀತಿಯಲ್ಲಿ ಎಂಆರ್‌ಪಿ ದರದ ಮೇಲೆ ರಿಯಾಯಿತಿ ನೀಡಲು ಪರವಾನಗಿ ದಾರರಿಗೆ ಅನುಮತಿ ನೀಡಲಾಗುತ್ತದೆ. ದೆಹಲಿಯಲ್ಲಿ ಒಟ್ಟು 849 ಮದ್ಯದಂಗಡಿಗಳಿದ್ದು, ಸುಮಾರು 276 ಮದ್ಯದ ಅಂಗಡಿಗಳನ್ನು ಖಾಸಗಿಯಾಗಿ ನಡೆಸ ಲಾಗುತ್ತಿದೆ.

ಇದೀಗ ಹೊಸ ನೀತಿಯ ಅನುಷ್ಟಾನದ ಹಿನ್ನೆಲೆಯಲ್ಲಿ ಮದ್ಯದ ಅಂಗಡಿ ಬಂದ್‌ ಮಾಡಲು ಆದೇಶ ಹೊರಡಿಸಿದೆ.

Leave a Reply

Your email address will not be published. Required fields are marked *