Wednesday, 14th May 2025

ಅಕ್ಟೋಬರ್‌ 11ರವರೆಗೆ ನೈಟ್ ಕರ್ಫ್ಯೂ

NIght Curfew

ಬೆಂಗಳೂರು: ರಾಜ್ಯ ಸರ್ಕಾರ ಅ.11ರವರೆಗೆ ನೈಟ್ ಕರ್ಫ್ಯೂ ಮುಂದುವರಿಸಿ ಆದೇಶಿಸಿದೆ.

ಈ ಹಿಂದಿನ ಆದೇಶವನ್ನು ಪರಿಷ್ಕರಿಸಿ ನೈಟ್ ಕರ್ಫ್ಯೂವನ್ನು ಅಕ್ಟೋಬರ್ 11ರ ಬೆಳಗ್ಗೆ ಆರು ಗಂಟೆಯವರೆಗೆ ಮುಂದುವರಿಸಿ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಆದೇಶ ಹೊರಡಿಸಿದ್ದಾರೆ. ರಾತ್ರಿ 10ರಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ.

ಅ.1ರಿಂದ ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್ ಗಳು, ರಂಗ ಮಂದಿರಗಳಲ್ಲಿ ಪೂರ್ಣ ಪ್ರಮಾಣದ ಪ್ರೇಕ್ಷಕರ ಭರ್ತಿಯೊಂದಿಗೆ ಕಾರ್ಯ ನಿರ್ವಹಿಸಲು ಅನುಮತಿಸ ಲಾಗಿದೆ. ಅ.3ರಿಂದ ಪಬ್ ಗಳನ್ನು ತೆರೆಯಲು ಅನು ಮತಿಸಲಾಗಿದೆ. ಆದರೆ ಕೋವಿಡ್ ನಿಯಮಗಳ ಪಾಲನೆ ಕಡ್ಡಾಯವಾಗಿದೆ.

ಕೋವಿಡ್ ಪಾಸಿಟಿವಿಟಿ ದರ 1ಕ್ಕಿಂತ ಕಡಿಮೆ ಇರುವಲ್ಲಿ 6ರಿಂದ 12ನೇ ತರಗತಿಯವರೆಗೆ ವಾರದಲ್ಲಿ ಐದು ದಿನಗಳ ಕಾಲ ಶಾಲೆ ತೆರಯಲು ಅನುಮತಿ ನೀಡಲಾಗಿದೆ.

ಕೋವಿಡ್ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ನೈಟ್ ಕರ್ಫ್ಯೂ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Leave a Reply

Your email address will not be published. Required fields are marked *