Tuesday, 13th May 2025

ಕೋಲ್ಕತಾ ಬ್ಯಾಟಿಂಗ್: ಆರಂಭಿಕರ ವಿಕೆಟ್ ಪತನ

ಅಬುಧಾಬಿ: ಅಬುಧಾಬಿಯಲ್ಲಿ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು.

ಪಂದ್ಯಕ್ಕಾಗಿ ಚೆನ್ನೈ ತಂಡ ಒಂದು ಬದಲಾವಣೆ ಮಾಡಿಕೊಂಡಿದೆ. ಡ್ವೇನ್ ಬ್ರಾವೋ ಬದಲು ಸ್ಯಾಮ್ ಕರ್ರನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಕೆಕೆಆರ್ ತಂಡವು ಕಳೆದ ಪಂದ್ಯದಲ್ಲಿ ಆಡಿದ ತಂಡವನ್ನೇ ಕಣಕ್ಕಿಳಿಸಿದೆ.

ಇತ್ತೀಚಿನ ವರದಿ ಪ್ರಕಾರ, ಕೋಲ್ಕತ್ತಾ ತಂಡ ಆರಂಭಿಕರನ್ನು ಕಳೆದುಕೊಂಡು, ಭರ್ತಿ ೫೦ ರನ್ ಗಳಿಸಿದೆ. ಶುಬ್ಮನ್ ಗಿಲ್ ರನೌಟ್ ಆದರೆ, ಯುವ ಆಟಗಾರ ವೆಂಕಟೇಶ್ ರನೌಟ್ ಆದರು.  ಐಪಿಎಲ್ ಕೂಟದಲ್ಲಿ ಇಂದು ಎರಡು ಪಂದ್ಯಗಳು ನಡೆಯಲಿದೆ. ಮೊದಲ ಪಂದ್ಯದಲ್ಲಿ ಕೆಕೆಆರ್ ಮತ್ತು ಸಿಎಸ್ ಕೆ ಮುಖಾಮುಖಿ ಯಾಗಿವೆ. ಇಂದು ಸಂಜೆ ದ್ವಿತೀಯ ಪಂದ್ಯದಲ್ಲಿ ಆರ್ ಸಿಬಿ ಮತ್ತು ಮುಂಬೈ ತಂಡಗಳು ಸೆಣಸಾಡಲಿದೆ.

ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಅಂಬಟಿ ರಾಯುಡು, ಸುರೇಶ್ ರೈನಾ, ಎಂಎಸ್ ಧೋನಿ (ನಾ/ವಿ.ಕೀ), ರವೀಂದ್ರ ಜಡೇಜಾ, ಸ್ಯಾಮ್ ಕರ್ರನ್, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಜೋಶ್ ಹ್ಯಾಜಲ್‌ವುಡ್

ಕೋಲ್ಕತ್ತಾ ನೈಟ್ ರೈಡರ್ಸ್: ಶುಭ್ಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ಇಯಾನ್ ಮಾರ್ಗನ್ (ನಾ), ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (ವಿ.ಕೀ), ಆಂಡ್ರೆ ರಸೆಲ್, ಸುನಿಲ್ ನರೈನ್, ಲಾಕಿ ಫರ್ಗುಸನ್, ವರುಣ್ ಚಕ್ರವರ್ತಿ, ಪ್ರಸಿದ್ ಕೃಷ್ಣ

Leave a Reply

Your email address will not be published. Required fields are marked *