ಕನಕದಾಸರು 16ನೆಯ ಶತಮಾನದಲ್ಲಿ ರಚಿಸಿದ ಮೋಹನ ತರಂಗಿಣಿ ಕೃತಿಯು, ವಿಭಿನ್ನ ಎನಿಸಿ ಗಮನ ಸೆಳೆಯುತ್ತದೆ. ಕನಕದಾಸರು ಹಲವು ಕೀರ್ತನೆಗಳನ್ನು ರಚಿಸಿ ಖ್ಯಾಾತರಾಗಿದ್ದರೂ, ಮೋಹನ ತರಂಗಿಣಿಯ ವಸ್ತು ಲೌಕಿಕ ಮತ್ತು ಶೃಂಗಾರ. ಇದು ಕೃಷ್ಣಚರಿತೆಯೂ ಹೌದು. ಮಹಾಭಾರತ ಮತ್ತು ಭಾಗವತದಂತಹ ಪುರಾಣಗಳಿಂದ ಇದರ ಕಥೆಯನ್ನು ಆಯ್ದುಕೊಂಡಿದ್ದರೂ, ಹಂಪಿಯಲ್ಲಿದ್ದ ವಿಜಯನಗರದ ಸಮಕಾಲೀನ ಜನಜೀವನದ ವಿವಿರವಾದ ಚಿತ್ರಣ ಈ ಶ್ರೀಕೃಷ್ಣದ ದ್ವಾಾರಕೆಯನ್ನು ವರ್ಣಿಸುವಾಗ, ಆಗಿನ ವಿಜಯನಗರ (ಹಂಪಿ)ಯ ವಿವರವಾದ ಚಿತ್ರಣ ಕಾಣುತ್ತದೆ. ಕೃಷ್ಣದೇವರಾಯನ ಸ್ತುತಿಯೂ ಇಲ್ಲಿದೆ. ವಿಜಯನಗರ ಸಾಮ್ರಾಾಜ್ಯದ ಚಿತ್ರಣವನ್ನು ನೀಡುವ ಈ ಕೃತಿಯು ಮಹಾಕಾವ್ಯ ವರ್ಗಕ್ಕೆೆ ಸೇರಿದೆ. ಇದರ ಗದ್ಯಾಾನುವಾದವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿದೆ.