Sunday, 11th May 2025

ಬಯೋಪಿಕ್‌ನಲ್ಲಿ ಕಿಚ್ಚ ಸುದೀಪ್?

ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಹಾಗೂ ವಿಕ್ರಾಂತ್ ರೋಣ ಚಿತ್ರಗಳು ತೆರೆಗೆ ಬರಲು ಸಿದ್ಧವಾಗಿವೆ. ಈ ಚಿತ್ರಗಳ ಬಳಿಕ ಕಿಚ್ಚನ ಮುಂದಿನ ಚಿತ್ರ ಯಾವುದು ಎಂದು ಅಭಿಮಾನಿಗಳು ಕಾದು ಕುಳಿತ್ತಿದ್ದಾರೆ.

ಅಶ್ವತ್ಥಾಮ ಚಿತ್ರದಲ್ಲಿ ಸುದೀಪ್ ನಟಿಸಬಹುದು, ಅನೂಪ್ ಭಂಡಾರಿ ಅವರೇ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ನಡುವೆಯೇ ಸುದೀಪ್ ಬಯೋಪಿಕ್‌ನಲ್ಲಿ ನಟಿಸಬಹುದೇ ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿವೆ. ಒಂದು ವೇಳೆ ಬಯೋಪಿಕ್‌ನಲ್ಲಿ ನಟಿಸುವುದಾದರೆ ಕಿಚ್ಚನ ಆಯ್ಕೆ ಏನಿರಬಹುದು ಎಂಬ ಕುತೂಹಲವೂ ಅಭಿಮಾನಿಗಳಲ್ಲಿದೆ. ಅದಕ್ಕೆ ಹಲವರು ಕ್ರೀಡಾಪಟು ಅವರ ಹೆಸರನ್ನು ಸೂಚಿಸಿದ್ದಾರೆ.

ಇನ್ನೇನು ಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ಜೀವನ ಚರಿತ್ರೆ ಸೆಟ್ಟೇರಲು ಸಿದ್ಧವಾಗಿದೆ. ಕನ್ನಡದಲ್ಲಿಯೂ ಚಿತ್ರ ಮೂಡಿಬರಬಹುದು ಎಂದು ಹೇಳಲಾಗು ತ್ತಿದೆ. ಒಂದು ವೇಳೆ ಕನ್ನಡದಲ್ಲಿ ದ್ರಾವಿಡ್ ಅವರ ಚಿತ್ರ ಸೆಟ್ಟೇರಿದ್ದೇ ಆದಲ್ಲಿ, ಸುದೀಪ್ ಅವರೇ ದ್ರಾವಿಡ್ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಇದಕ್ಕೆ ಪೂರಕ ಎನ್ನುವಂತೆ ಸುದೀಪ್ ದುಬೈಗೆ ತೆರಳಿದ್ದು, ಅಲ್ಲಿ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಿ ಸಂತಸಪಟ್ಟಿದ್ದಾರೆ.

ಮುಂದೆ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ವೇಳೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವನ್ನು ವೀಕ್ಷಿಸುವುದಾಗಿ ಹೇಳಿದ್ದಾರೆ. ಇದೆಲ್ಲವನ್ನು ನೋಡಿ ದರೆ ಸುದೀಪ್ ಮುಂದೆ ಕ್ರೀಡಾಪಟುವಿನ ಬಯೋಪಿಕ್‌ನಲ್ಲಿ ನಟಿಸಲು ಸಿದ್ಧವಾಗಿದ್ದಾರಾ? ಅದಕ್ಕಾಗಿ ಕ್ರಿಕೆಟ್‌ನತ್ತ ಹೆಚ್ಚು ಆಸಕ್ತಿ ತಾಳಿದ್ದಾರಾ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ.

ಸಿಸಿಎಲ್‌ನಲ್ಲಿ ಕಿಚ್ಚನ ಛಾಪು 
ಮೊದಲಿನಿಂದಲೂ ಕಿಚ್ಚನಿಗೆ ಕ್ರಿಕೆಟ್ ಮೇಲೆ ಅಪಾರ ಆಸಕ್ತಿ. ಹಾಗಾಗಿಯೇ ಸುದೀಪ್ ಸಿಸಿಎಲ್ ಪಂದ್ಯಾವಳಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಮುನ್ನಡಿಸಿದ್ದಾರೆ. ಅದ್ಭುತ ಪ್ರದರ್ಶನ ತೋರಿ ತಮ್ಮ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ.

Leave a Reply

Your email address will not be published. Required fields are marked *