Wednesday, 14th May 2025

ಮಾಜಿ ರಾಷ್ಟ್ರಪತಿ ದಿವಂಗತ ಗ್ಯಾನಿ ಜೇಲ್‌ ಸಿಂಗ್‌ ಮೊಮ್ಮಗ ಬಿಜೆಪಿಗೆ ಸೇರ್ಪಡೆ

ನವದೆಹಲಿ: ಭಾರತದ ಮಾಜಿ ರಾಷ್ಟ್ರಪತಿ ದಿವಂಗತ ಗ್ಯಾನಿ ಜೇಲ್‌ ಸಿಂಗ್‌ ಅವರ ಮೊಮ್ಮಗ ಇಂದ್ರಜೀತ್ ಸಿಂಗ್ ಅವರು ಸೋಮವಾರ ಬಿಜೆಪಿಗೆ ಸೇರ್ಪಡೆ ಗೊಂಡರು.

ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಪಂಜಾಬ್ ಘಟಕದ ಉಸ್ತುವಾರಿ ದುಷ್ಯಂತ್ ಗೌತಮ್, ಇದು ಪಂಜಾಬ್‌ನ ಜನರ ಹೃದಯದಲ್ಲಿ ಪಕ್ಷಕ್ಕೆ ವಿಶೇಷ ಸ್ಥಾನವಿದೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದರು.

ಪ್ರಧಾನ ಕಚೇರಿಯಲ್ಲಿ ಬಿಜೆಪಿ ಸೇರಿದ ನಂತರ ಮಾತನಾಡಿದ ಇಂದ್ರಜೀತ್ ಸಿಂಗ್, ತಮ್ಮ ತಾತನ ಆಸೆಗಳನ್ನು ಪೂರೈಸಿರುವುದಾಗಿ ತಿಳಿಸಿದರು.

ನನ್ನ ತಾತನೊಂದಿಗೆ ಕಾಂಗ್ರೆಸ್ ಸರಿಯಾಗಿ ವರ್ತಿಸಲಿಲ್ಲ. ನಾನು ಮದನ್ ಲಾಲ್ ಖುರಾನಾ ದಿನಗಳಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದೆ. ನಾನು ಬಿಜೆಪಿಗೆ ಸೇರಬೇಕೆಂದು ಬಯಸಿದ್ದರು. ಅವರು ನನಗೆ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಅಡ್ವಾಣಿಯವರನ್ನು ಪರಿಚಯಿಸಿದ್ದರು ಹೇಳಿದರು.

ಸಿಂಗ್ ಅವರು ರಾಮಗರ್ಹಿಯಾ ಸಿಖ್ ಸಮುದಾಯದಿಂದ ಬಂದವರು. ಈ ಸಮುದಾಯವು ಪಂಜಾಬ್‌ನ ದೋಬಾ ಮತ್ತು ಮಜಾ ಪ್ರಾಂತ್ಯಗಳಲ್ಲಿ ಗಣನೀಯ ಅಸ್ತಿತ್ವ ಹೊಂದಿದೆ.

Leave a Reply

Your email address will not be published. Required fields are marked *