Tuesday, 13th May 2025

ಶಸ್ತ್ರಚಿಕಿತ್ಸೆ ಬಳಿಕ ತುರ್ತು ನಿಗಾ ಘಟಕದಲ್ಲಿ ಪೀಲೆ

ಪಾಲೊ: ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಬ್ರೆಜಿಲ್ ನ ಮಾಜಿ ಫುಟ್ಬಾಲ್ ಆಟಗಾರ ಪೀಲೆ(80) ಚೇತರಿಸಿಕೊಂಡಿದ್ದರೂ ತುರ್ತು ನಿಗಾ ಘಟಕದಲ್ಲಿದ್ದಾರೆ.

ತೃಪ್ತಿದಾಯಕ ರೀತಿಯಲ್ಲಿ ಚೇತರಿಸಿಕೊಂಡಿದ್ದಾರೆ. ಆದಾಗ್ಯೂ, ತುರ್ತು ನಿಗಾ ಘಟಕದಲ್ಲಿದ್ದಾರೆ ಎಂದು ಅಲ್ಟರ್ಬ್ ಐನ್ ಸ್ಟೈನ್ ಆಸ್ಪತ್ರೆ ತಿಳಿಸಿದೆ. ಪೀಲೆ, ಚುರುಕಾಗಿ ಮಾತನಾಡುತ್ತಿದ್ದು, ಆರೋಗ್ಯದ ಪರಿಸ್ಥಿತಿ ಸಹಜ ಸ್ಥಿತಿಯಲ್ಲಿದೆ ಎಂದು ಆಸ್ಪತ್ರೆ ಹೇಳಿದೆ.

ಮೂರು ವಿಶ್ವಕಪ್ ಗೆದ್ದ ಏಕೈಕ ಪುರುಷ ಆಟಗಾರ ಪೀಲೆ 2012 ರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಓಡಾಟದ ಸಮಸ್ಯೆಯಿಂದ ನರಳುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಮೂತ್ರಪಿಂಡ ಮತ್ತಿತರ ಸಮಸ್ಯೆಗಳಿಂದ ಅನೇಕ ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು.

ಪೀಲೆ 1958, 1962 ಮತ್ತು 1970 ವಿಶ್ವಕಪ್‌ಗಳನ್ನು ಗೆದ್ದರು, ಮತ್ತು 92 ಪಂದ್ಯಗಳಲ್ಲಿ 77 ಗೋಲುಗಳೊಂದಿಗೆ ಬ್ರೆಜಿಲ್‌ನ ಸಾರ್ವಕಾಲಿಕ ಅಗ್ರಗಣ್ಯ ಸ್ಕೋರರ್ ಆಗಿದ್ದಾರೆ.

 

Leave a Reply

Your email address will not be published. Required fields are marked *