Monday, 12th May 2025

ಇಂದು ಸರ್ದಾರ್ ಧಾಮ್ ಎರಡನೇ ಹಂತದ ಕನ್ಯಾ ಛತ್ರಾಲಯ ಭೂಮಿ ಪೂಜೆ

ನವದೆಹಲಿ: ಅಹ್ಮದಾಬಾದ್ ನ ಸರ್ದಾರ್ ಧಾಮ್ ಭವನವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಶನಿವಾರ ಉದ್ಘಾಟಿಸ ಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಸರ್ದಾರ್ ಧಾಮ್ ಎರಡನೇ ಹಂತದ ಕನ್ಯಾ ಛತ್ರಾಲಯದ (ಬಾಲಕಿಯರ ಹಾಸ್ಟೆಲ್) ‘ಭೂಮಿ ಪೂಜೆ’ ನೆರವೇರಿಸ ಲಿದ್ದಾರೆ.

ಸರ್ದಾರ್ ಧಾಮ್ ಶೈಕ್ಷಣಿಕ ಮತ್ತು ಸಾಮಾಜಿಕ ಪರಿವರ್ತನೆ, ಸಮಾಜದ ದುರ್ಬಲ ವರ್ಗಗಳ ಉನ್ನತಿ ಮತ್ತು ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿ ಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಕಚೇರಿಯ ಅಧಿಕೃತ ಪ್ರಕಟಣೆ ತಿಳಿಸಿದೆ. ಅಹಮದಾಬಾದ್‌ನಲ್ಲಿ ಸ್ಥಾಪಿಸಲಾಗಿರುವ ಸರ್ದಾರ್ಧಂ ಭವನವು ಅತ್ಯಾ ಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ. 2 ಸಾವಿರ ವಿದ್ಯಾರ್ಥಿನಿಯರು ಉಳಿದುಕೊಳ್ಳಲು ಅನುಕೂಲವಾಗುವ ಕನ್ಯಾ ಛತ್ರಾಲಯವನ್ನು ನಿರ್ಮಿಸಲಾಗುತ್ತಿದೆ.

ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ಗುಜರಾತ್ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಕೂಡ ಭಾಗವಹಿಸಲಿದ್ದಾರೆ.

Leave a Reply

Your email address will not be published. Required fields are marked *