Friday, 16th May 2025

ನಟ ರಜತ್ ಬೇಡಿ ವಿರುದ್ಧ ಪ್ರಕರಣ

ನವದೆಹಲಿ: ಮುಂಬೈನ ಅಂಧೇರಿ ಪ್ರದೇಶದಲ್ಲಿ ವ್ಯಕ್ತಿಯೋರ್ವನಿಗೆ ಮೇಲೆ ಕಾರು ಹತ್ತಿಸಿದ ಪ್ರಕರಣಕ್ಕೆ ಸಂಬಂಧಿಸಿ, ಬಾಲಿವುಡ್ ನಟ ರಜತ್ ಬೇಡಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣವನ್ನ ಡಿಎನ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ನಟ ಗಾಯಗೊಂಡ ವ್ಯಕ್ತಿಯನ್ನ ಕೂಪರ್ ಆಸ್ಪತ್ರೆಗೆ ಕರೆ ತಂದಿದ್ದಾನೆ ಎಂದು ವರದಿ ಯಾಗಿದೆ. ಅಲ್ಲಿ ಅವ್ರು ಸಂತ್ರಸ್ತನಿಗೆ ಗುದ್ದಿರುವುದನ್ನ ಒಪ್ಪಿಕೊಂಡಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.

ನಟ ಮನೆಗೆ ಹೋಗುತ್ತಿದ್ದಾಗ ಸಿಟ್ಲಾ ದೇವಿ ದೇವಾಲಯದ ಬಳಿ (ಇದು ಡಿಎನ್ ನಗರ ಮೆಟ್ರೋ ನಿಲ್ದಾಣದಿಂದ ನಾಲ್ಕು ನಿಮಿಷ ಗಳ ನಡಿಗೆ) ಸಂಜೆ ಈ ಘಟನೆ ಸಂಭವಿಸಿದೆ. ಸಂತ್ರಸ್ತನನ್ನ ರಾಜೇಶ್ ಬೌಧ್ (40) ಎಂದು ಗುರುತಿಸಲಾಗಿದ್ದು, ಬೇಡಿ ಅವರ ಕಾರಿಗೆ ಡಿಕ್ಕಿ ಹೊಡೆದಾಗ ಅವರು ಮಾದಕ ಸ್ಥಿತಿಯಲ್ಲಿದ್ದರು ಎಂದು ವರದಿಯಾಗಿದೆ.

‘ನಟ ತಕ್ಷಣ ಪಾದಚಾರಿಯನ್ನು ಕೂಪರ್ ಆಸ್ಪತ್ರೆಗೆ ಕರೆದೊಯ್ದರು ಮತ್ತು ಅವರನ್ನು ದಾಖಲಿಸಿದ ನಂತರ, ಡಿಎನ್ ನಗರ ಪೊಲೀಸ್ ಠಾಣೆಗೆ ಹಿಂತಿರುಗಿ ಘಟನೆ ವಿವರಿಸಿದರು. ಗಾಯಗೊಂಡ ವ್ಯಕ್ತಿ ಪ್ರಜ್ಞಾಹೀನನಾಗಿದ್ದಾನೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *