Sunday, 11th May 2025

ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ವ್ಯಕ್ತಿಗೆ ಐದು ವರ್ಷ ಜೈಲು ಶಿಕ್ಷೆ

ವಿಯೆಟ್ನಾಂ: ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಬೇಕಾಬಿಟ್ಟಿ ಓಡಾಡಿದ್ದ ವ್ಯಕ್ತಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಲೆ ವಾನ್ ಟ್ರೈ ಎಂಬ ವ್ಯಕ್ತಿ ಜುಲೈನಲ್ಲಿ ಕರೋನಾ ವೈರಸ್ ಹಾಟ್‌ಸ್ಪಾಟ್ ಹೋ ಚಿ ಮಿನ್ಹ್ ನಗರದಿಂದ ತನ್ನ ತವರು ಪ್ರಾಂತ್ಯ ವಾದ ಕಾ ಮೌಗೆ ಪ್ರಯಾಣಿಸಿದ್ದರು. ಬೇರೆ ಪ್ರಾಂತ್ಯಗಳಿಂದ ಆಗಮಿಸುವವರಿಗೆ ಇಲ್ಲಿ 21 ದಿನಗಳ ಕ್ವಾರಂಟೈನ್ ನಿಯಮ ವಿಧಿಸಲಾಗಿದೆ. ಈ ನಿಯಮ ಉಲ್ಲಂಘಿಸಿ ನಗರದಲ್ಲಿ ತಿರುಗಾಡಿದ ಆರೋಪದ ಮೇರೆಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಈತ ಇತರ ಜನರಿಗೆ ಅಪಾಯಕಾರಿ ಸಾಂಕ್ರಾಮಿಕ ರೋಗಗಳನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿ ಕೋರ್ಟ್ 28 ವರ್ಷದ ಲೆ ವಾನ್ ಟ್ರೈಗೆ ಶಿಕ್ಷೆ ವಿಧಿಸಿದೆ. ಸ್ಛಳೀಯ ಆಡಳಿತ ಹೋಮ್ ವೈದ್ಯಕೀಯ ಕ್ವಾರಂಟೈನ್ ನಿಯಂತ್ರಣವನ್ನು ಟ್ರೈ ಉಲ್ಲಂಘಿಸಿದ್ದ ರಿಂದ ಅನೇಕ ಜನರು ಕೋವಿಡ್ -19 ಸೋಂಕಿಗೆ ಒಳಗಾಗಿದ್ದಾರೆ.

ವಿಯೆಟ್ನಾಂ ಅತ್ಯಂತ ಗಂಭೀರವಾದ ಕೋವಿಡ್ -19 ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಸುಮಾರು 540,000 ಸೋಂಕು ಪ್ರಕರಣಗಳು ಮತ್ತು 13,000 ಕ್ಕೂ ಹೆಚ್ಚು ಸಾವುಗಳು ದಾಖಲಾಗಿವೆ.

ವಿಯೆಟ್ನಾಂ ರಾಜಧಾನಿ ಹನೋಯಿ ಮತ್ತು ವಾಣಿಜ್ಯ ಕೇಂದ್ರ ಹೋ ಚಿ ಮಿನ್ಹ್ ನಗರವು ಕಳೆದ ಕೆಲವು ತಿಂಗಳುಗಳಿಂದ ಕಟ್ಟುನಿಟ್ಟಾದ ಲಾಕ್‌ಡೌನ್‌ನಲ್ಲಿದೆ.

 

Leave a Reply

Your email address will not be published. Required fields are marked *