Tuesday, 13th May 2025

1819 ಕೋಟಿ. ರೂ. ನಕಲಿ ಜಿಎಸ್’ಟಿ ವಂಚನೆ ಜಾಲ ಪತ್ತೆ

ಭುವನೇಶ್ವರ: ಒಡಿಶಾ ರಾಜ್ಯದ ಭುವನೇಶ್ವರದಲ್ಲಿ 1819 ಕೋಟಿ. ರೂ. ನಕಲಿ ಜಿಎಸ್’ಟಿ ವಂಚನೆ ಜಾಲವೊಂದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ದೇಶದಲ್ಲೇ ಅತಿ ದೊಡ್ಡ ನಕಲಿ ಜಿ ಎಸ್ ಟಿ ವಂಚನೆ ಜಾಲ ಇದಾಗಿದೆ. ಜಾರಿ ನಿರ್ದೇಶನಾಲಯ ಅಧಿಕಾರಿಗಳು ಆರೋಪಿಗಳು ಕಾರ್ಯನಿರ್ವಹಿಸುತ್ತಿದ್ದ ಕಚೇರಿ ಮೇಲೆ ದಾಳಿ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದೆ.

ನಕಲಿ ಕಂಪನಿಗಳ ಹೆಸರಿನಲ್ಲಿ ನಕಲಿ ಖರೀದಿ ರಶೀದಿಗಳನ್ನು ಸೃಷ್ಟಿಸುತ್ತಿದ್ದರು. ಈ ಕಳ್ಳ ಜಾಲದ ಮಾಸ್ಟರ್ ಮೈಂಡ್ ಅಮಿತ್ ಕುಮಾರ್, ಚಾರ್ಟರ್ಡ್ ಅಕೌಂಟೆಂಟ್ ವೃತ್ತಿ ನಿರ್ವಹಿಸುತ್ತಿದ್ದಾನೆ. ಬಂಧಿತರಲ್ಲಿ ಆತನೂ ಸೇರಿದ್ದಾನೆ.

ಈತನ ವಂಚನೆ ಜಾಲ ಪಶ್ಚಿಮ ಬಂಗಾಳ, ಜಾರ್ಖಂಡ್, ಚತ್ತೀಸ್ ಗಢ ಮತ್ತು ದೆಹಲಿಗೂ ಈತನ ಜಾಲ ಹರಡಿರುವುದು ಕಂಡುಬಂದಿದೆ.

Leave a Reply

Your email address will not be published. Required fields are marked *